ಪ್ಯಾರಿಸ್, ಜ. 18 (DaijiworldNews/SM): ಲಸಿಕೆ ಹಾಕಿಸಿಕೊಳ್ಳದಿದ್ದಲ್ಲಿ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್ನಿಂದಲೂ ನಿರ್ಬಂಧಿಸುವ ಸಾಧ್ಯತೆಯಿದೆ. ಈ ಬಗ್ಗೆ ಫ್ರಾನ್ಸ್ ಸ್ಪಷ್ಟಪಡಿಸಿದೆ.
ಫ್ರಾನ್ಸ್ ನ ನೂತನ ಲಸಿಕೆ ಪಾಸ್ ಕಾನೂನಿನಿಂದ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಅಲ್ಲಿನ ಸರಕಾರ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಫ್ರಾನ್ಸ್ ಕ್ರೀಡಾ ಸಚಿವಾಲಯ ಸೋಮವಾರ ಹೇಳಿದ ನಂತರ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್ನಿಂದಲೂ ನಿರ್ಬಂಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಕೋವಿಡ್ -19 ವಿರುದ್ಧದ ಲಸಿಕೆ ಹಾಕಿಸಿಕೊಳ್ಳದ ವಿಶ್ವದ ನಂಬರ್ ಒನ್ ಜೊಕೊವಿಕ್, ಅವರನ್ನು ಈಗಾಗಲೇ ಆಸ್ಟ್ರೇಲಿಯಾ ತಿರಸ್ಕರಿಸಿದೆ.
ರೆಸ್ಟೋರೆಂಟ್, ಕೆಫೆ, ಸಿನಿಮಾ ಮತ್ತು ದೂರ ಪ್ರಯಾಣದ ರೈಲು ಸಂಚಾರಕ್ಕಾಗಿ ಲಸಿಕೆ ಪ್ರಮಾಣ ಪತ್ರ ಜನರಿಗೆ ಅಗತ್ಯ ಎಂದು ಫ್ರಾನ್ಸ್ ಲಸಿಕಾ ಪಾಸ್ ಕಾನೂನನ್ನು ಫ್ರಾನ್ಸ್ ಸಂಸತ್ ಭಾನುವಾರ ಅಂಗೀಕರಿಸಿತ್ತು.