ನವದೆಹಲಿ, ಜ 15 (DaijiworldNews/PY): ಭಾರತದ ವಿರುದ್ದದ 3ನೇ ಟೆಸ್ಟ್ ಕ್ರಿಕೆಟ್ ಪಂದ್ಯದ 2 ಇನ್ನಿಂಗ್ಸ್ಗಳಲ್ಲಿ 72 ಹಾಗೂ 82 ರನ್ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಕೀಗನ್ ಪೀಟರ್ಸನ್ ಆಟವನ್ನು ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಶ್ಲಾಘಿಸಿದ್ದಾರೆ.
"ದಕ್ಷಿಣ ಆಫ್ರಿಕಾದ ಬ್ಯಾಟರ್, ಭಾರತದ ದಂತಕಥೆ ಗುಂಡಪ್ಪ ವಿಶ್ವನಾಥ್ ಅವರನ್ನು ನೆನಪಿಸಿದ್ದಾರೆ" ಎಂದಿದ್ದಾರೆ.
ಕೇಪ್ ಟೌನ್ನಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಎರಡು ಅರ್ಧ ಶತಕಗಳನ್ನು ಸಿಡಿಸಿದ ಪೀಟರ್ಸನ್, ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೂ ಪಾತ್ರರಾದರು.
ಈ ಕುರಿತು ಟ್ವೀಟ್ ಮಾಡಿರುವ ರವಿ ಶಾಸ್ತ್ರಿ, "ಕೀಗನ್ ಪೀಟರ್ಸನ್ ಅವರ ಅತ್ಯುತ್ತಮವಾಗಿದ್ದು, ನನ್ನ ಬಾಲ್ಯದ ಹೀರೊ ಗುಂಡಪ್ಪ ವಿಶ್ವನಾಥ್ ಅವರನ್ನು ನೆನಪಿಸಿತು" ಎಂದು ಹೇಳಿದ್ದಾರೆ.