ದುಬೈ, ಜ 07 (DaijiworldNews/PY): ಟಿ20 ಪಂದ್ಯಗಳ ನಿಯಮಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಹತ್ತರವಾದ ಬದಲಾವಣೆಗಳನ್ನು ಘೋಷಣೆ ಮಾಡಿದೆ.
ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲೊ ನಿಧಾನಗತಿಯ ಓವರ್ ಮಾಡಿದ್ದಲ್ಲಿ ಆ ತಂಡ ಅದಕ್ಕೆ ದುಬಾರಿಯಾದ ದಂಡ ತೆರಬೇಕಾಗುತ್ತದೆ. ಯಾವ ತಂಡ ನಿಧಾನಗತಿಯ ಓವರ್ ಮಾಡುತ್ತದೋ ಆ ತಂದ ಉಳಿದ ಇನ್ನಿಂಗ್ಸ್ ಪೂರ್ತಿ 30 ಯಾರ್ಡ್ ವೃತ್ತದಲ್ಲಿ ಓರ್ವ ಫೀಲ್ಡರ್ ಅನ್ನು ಕಡಿಮೆ ಹೊಂದಬೇಕಾಗುತ್ತದೆ . ಇದೀ ತಿಂಗಳಿನಲ್ಲಿ ಈ ನಿಯಮ ಜಾರಿಯಾಗಲಿದೆ.
ಟಿ20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಇನ್ನಿಂಗ್ಸ್ನ ಮಧ್ಯೆ ಪಾನೀಯ ವಿರಾಮವನ್ನು ಆಯ್ಕೆಯನ್ನಾಗಿ ನೀಡಿದೆ. ಈ ಹಿಂದೆ ನಿಧಾನಗತಿಯ ಓವರ್ಗಳಿಗೆ ಹಣಕಾಸು ರೂಪದಲ್ಲಿ ಹಾಗೂ ಡಿಮೆರಿಟ್ ಪಾಯಿಂಟ್ಸ್ ರೂಪದಲ್ಲಿ ದಂಡ ವಿಧಿಸಲಾಗುತ್ತಿತ್ತು. ಇದೀಗ ಇದರ ಜೊತೆ ಪಂದ್ಯದಲ್ಲೇ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ವೆಸ್ಟ್ ಇಂಡೀಸ್ ಹಾಗೂ ಐರ್ಲೆಂಡ್ ತಂಡಗಳು ಹೊಸ ನಿಯಮಾವಳಿಗಳ ಅಡಿಯಲ್ಲಿ ಜ.16ರಂದು ಜಮೈಕಾದಲ್ಲಿ ಪಂದ್ಯವನ್ನು ಆಡಲಿವೆ.