ಮಂಗಳೂರು, ಡಿ.29 (DaijiworldNews/PY): ಏಷ್ಯನ್ ಗೇಮ್ಸ್ನ ಸ್ವರ್ಣ ಪದಕ ವಿಜೇತೆ, ಕರ್ನಾಟಕದ ಅಥ್ಲೀಟ್ ಮಚ್ಚೆಟ್ಟಿರ ರಾಜು ಪೂವಮ್ಮ ಅವರು ಕೇರಳದ ಅಥ್ಲೀಟ್ ಜಿತಿನ್ ಪೌಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಂಗಳೂರು ಹೊರವಲಯದ ಅಡ್ಯಾರ್ ಗಾರ್ಡನ್ನ ವಿ ಕೆ ಶೆಟ್ಟಿ ಆಡಿಟೋರಿಯಂನಲ್ಲಿ ಕೊಡವ ಸಂಪ್ರದಾಯದಂತೆ ನೆರವೇರಿದ ವಿವಾಹ ಕಾರ್ಯಕ್ರಮದಲ್ಲಿ ಪೂವಮ್ಮ ಅವರ ತಂದೆ ಮಚ್ಚೆಟ್ಟಿರ ಜಿ ತಮ್ಮಯ್ಯ, ಆತಯಿ ಜಾನಕಿ, ಜಿತಿನ್ ಪೌಲ್ ಅವರ ತಾಯಿ ಜಾನ್ಸಿ ಸೇರಿದಂತೆ ಕುಟುಂಬದವರು, ಬಂಧು-ಮಿತ್ರರು ಸ್ನೇಹಿತರು ಉಪಸ್ಥಿತರಿದ್ದರು.
ಕೇರಳದ ತ್ರಿಶೂರ್ನಲ್ಲಿ ಜನವರಿ 1ರಂದು ಮತ್ತೊಂದು ಕಾರ್ಯಕ್ರಮ ನಡೆಯಲಿದೆ.
ಪೂವಮ್ಮ ಹಾಗೂ ಜಿತಿನ್ ಪೌಲ್ ಕ್ರೀಡಾ ದಂಪತಿಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದಾರೆ.
ಕೊಡಗು ಮೂಲದ 31 ವರ್ಷದ ಪೂವಮ್ಮ 2014ರ ಇಂಚೋನ್ ಏಷ್ಯಾಡ್ನಲ್ಲಿ 1 ಚಿನ್ನ, 1 ಕಂಚು ಹಾಗೂ 2018ರ ಜಕಾರ್ತ್ ಏಷ್ಯಾಡ್ನಲ್ಲಿ 2 ಚಿನ್ನ ಗೆದ್ದಿದ್ದರು. ಒಲಿಂಪಿಕ್ಸ್ನಲ್ಲಿ ಪೂವಮ್ಮ ಅವರು 2 ಬಾರಿ ಹಾಗೂ ಅಂತರಾಷ್ಟ್ರೀಯ ಕೂಟದಲ್ಲಿ 4 ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.
ಜಿತಿನ್ ಪೌಲ್ ಅವರು 400 ಮೀಟರ್ ಅಡೆತಡೆ ಓಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದ್ದು, ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.