ನವದೆಹಲಿ, ಡಿ.21 (DaijiworldNews/SM): ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಅವರ ಅವಧಿ ಮುಕ್ತಾಯಗೊಂಡು ಇದೀಗ ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಆದರೆ, ಈ ಹಿಂದಿನ ಕೋಚ್ ರವಿಶಾಸ್ತ್ರಿ ವಿರುದ್ಧ ಸ್ಪಿನ್ನರ್ ಆರ್. ಅಶ್ವಿನ್ ಅಸಮಾಧಾನ ಹೊರಹಾಕಿದ್ದಾರೆ.
2019ರ ಸಿಡ್ನಿ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ವಿಕೆಟ್ಗಳನ್ನು ಕಬಳಿಸಿದ ನಂತರ ಕುಲ್ದೀಪ್ ಯಾದವ್, ಭಾರತದ ಪ್ರಮುಖ ವಿದೇಶಿ ಸ್ಪಿನ್ನರ್ ಎಂದು ಆಗಿನ ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದರು. ಇದು ತನಗೆ ತುಂಬಾ ನೋವನ್ನುಂಟು ಮಾಡಿದೆ ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಕುಲ್ದೀಪ್ ಯಾದವ್ ಲೀಡಿಂಗ್ ವಿದೇಶಿ ಸ್ಪಿನ್ನರ್ ಎಂದು ರವಿಶಾಸ್ತ್ರಿಯವರ ಹೇಳಿಕೆಯು ಅಶ್ವಿನ್ ಅವರನ್ನು ತುಂಬಾ ನೋವಿಸಿದೆಯಂತೆ. ಈ ವಿಚಾರವನ್ನು ಆರ್. ಅಶ್ವಿನ್ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲೂ ಕೂಡ ಆರ್. ಅಶ್ವಿನ್ ಅವರು ಉತ್ತಮ ಸಾಧನೆ ಮಾಡಿದ್ದರು. ಆದರೂ ಕೂಡ ಅವರನ್ನು ರವಿಶಾಸ್ತ್ರಿ ಕಡಿಗಣಿಸಿದ್ದರು ಎನ್ನುವ ವಿಚಾರವನ್ನು ಅಶ್ವಿನ್ ನೆನಪಿಸಿಕೊಂಡಿದ್ದಾರೆ.