ದುಬೈ, ಡಿ 14 (DaijiworldNews/MS): ಕ್ರಿಕೆಟ್ ಅಂಗಳದಲ್ಲಿ ಯುವ ಸ್ಪಿನ್ನರ್ ವಿಶೇಷ ದಾಖಲೆಯೊಂದನ್ನು ಬರೆದಿದ್ದಾನೆ. ದುಬೈನಲ್ಲಿ ನಡೆಯುತ್ತಿರುವ ಕಾರ್ವಾನ್ ಅಂಡರ್-19 ಗ್ಲೋಬಲ್ ಲೀಗ್ ಟಿ- 20 ಪಂದ್ಯದಲ್ಲಿ ಭಾರತೀಯ ಮೂಲದ(ದೆಹಲಿ) ಬಾಲಕ ಎಡಗೈ ಸ್ಪಿನ್ನರ್ ಹರ್ಷಿತ್ ಸೇಠ್ ಒಂದೇ ಓವರ್ನಲ್ಲಿ ಆರು ವಿಕೆಟ್ ಕಬಳಿಸುವ ಮೂಲಕ ಅಪರೂಪದ ದಾಖಲೆ ನಿರ್ಮಿಸಿದ್ದಾನೆ.
ದುಬೈ ಕ್ರಿಕೆಟ್ ಕೌನ್ಸಿಲ್ ಸ್ಟಾರ್ಲೆಟ್ಸ್ ಪರ ಆಡುತ್ತಿರುವ ಸೇಠ್ ಪಾಕಿಸ್ತಾನದ ಹೈದರಾಬಾದ್ನ ಹಾಕ್ಸ್ ಅಕಾಡೆಮಿ ಆರ್ ಸಿ ಜಿ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಹರ್ಷಿತ್ ಡಬಲ್ ಹ್ಯಾಟ್ರಿಕ್ ಸೇರಿದಂತೆ ಒಟ್ಟು 8 ವಿಕೆಟ್(4-0-4-8) ಕಬಳಿಸಿದ್ದಾರೆ್
ಪ್ರಸಕ್ತ ಕ್ರಿಕೆಟ್ನಲ್ಲಿ ಬಹುತೇಕ ಅಸಾಧ್ಯವಾದ ಡಬಲ್ ಹ್ಯಾಟ್ರಿಕ್ ದಾಖಲೆಯನ್ನು ಎಡಗೈ ಸ್ಪಿನ್ನರ್ ಹರ್ಷಿತ್ ಸಾಧಿಸಿದ್ದಾನೆ. ಈ ವರ್ಷ ನವೆಂಬರ್ 28 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಂತಹ ಘಟನೆ ಇನ್ನೂ ನಡೆದಿಲ್ಲ.
ದುಬೈ ಜೆಮ್ಸ್ ಮಾಡರ್ನ್ ಅಕಾಡೆಮಿಯಲ್ಲಿ 11ನೇ ತರಗತಿ ವಿದ್ಯಾರ್ಥಿಯಾಗಿರುವ ಹರ್ಷಿತ್ ಅವರ ಕುಟುಂಬವು ದೆಹಲಿ ಮೂಲದವರು ಎಂಬುದು ವಿಶೇಷ. ಇದೀಗ ಯುಎಇ ಕ್ರಿಕೆಟ್ನಲ್ಲಿ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಮಿಂಚುತ್ತಿರುವ ಹರ್ಷಿತ್ ಮುಂದೆ ಅಂಡರ್-19 ವಿಶ್ವಕಪ್ ಆಡುವ ಆಸೆ ವ್ಯಕ್ತಪಡಿಸಿದ್ದಾರೆ.