ನವದೆಹಲಿ, ಡಿ 02 (DaijiworldNews/MS): ಒಮಿಕ್ರೋನ್ ಎನ್ನುವ ಹೊಸ ರೂಪಾಂತರಿ ಕೋವಿಡ್-19 ವೈರಸ್ ಬಗ್ಗೆ ಹೆಚ್ಚುತ್ತಿರುವ ಜಾಗತಿಕ ಕಳವಳಗಳ ನಡುವೆ ಭಾರತ- ದಕ್ಷಿಣ ಆಫ್ರಿಕಾ ಸರಣಿಯನ್ನು ಒಂದು ವಾರಗಳ ಕಾಲ ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಡಿಸೆಂಬರ್ 17ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೂರು ಟೆಸ್ಟ್, ಮೂರು ಏಕ ದಿನದ ಪಂದ್ಯಾವಳಿ ಹಾಗೂ ನಾಲ್ಕು ಟಿ20 ಪಂದ್ಯಗಳನ್ನುಆಯೋಜಿಸಲಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಸ್ವದೇಶಿ ಸರಣಿ ಮುಗಿದ ಬಳಿಕ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಬೇಕಿತ್ತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಫ್ರಿಕಾ ಸರಣಿಗೆ ಟೀಮ್ ಇಂಡಿಯಾ ಆಯ್ಕೆ ಪ್ರಕ್ರಿಯೆಯನ್ನು ಭಾರತೀಯ ಸರ್ಕಾರದ ನಿರ್ಧಾರದ ನಂತರ ನಡೆಸಲಿದೆ ಎಂದು ವರದಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಹೊಸ ಕೋವಿಡ್-19 ವೇರಿಯಂಟ್ ಬಿ.1.1.529 ಅನ್ನು 'ಕಾಳಜಿಯ ರೂಪಾಂತರ' ಎಂದು ಘೋಷಿಸಿದೆ. ಬಿಸಿಸಿಐ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು, ಸರಣಿಯ ಭವಿಷ್ಯದ ಬಗ್ಗೆ ಶೀಘ್ರದಲ್ಲೇ ನಿರ್ಧರಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.