ಅಬುದಾಬಿ, ನ. 03 (DaijiworldNews/SM): ಟಿ-20 ವಿಶ್ವ ಕಪ್ ನಲ್ಲಿ ಆರಂಭಿಕ ಎರಡು ಪಂದ್ಯಗಳನ್ನು ಹೀನಾಯವಾಗಿ ಸೋತಿರುವ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲಿ ಚೇತರಿಸಿಕೊಂಡಿದೆ. ಬ್ಯಾಟಿಂಗ್ ವಿಭಾಗದ ಉತ್ತಮ ಪ್ರದರ್ಶನದಿಂದಾಗಿ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಇಪ್ಪತ್ತು ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿತು. ಟೀಂ ಇಂಡಿಯಾ ಪರ ಅಬ್ಬರಿಸಿದ ರಾಹುಲ್ 69, ರೋಹಿತ್ 74, ಹಾರ್ದಿಕ್ ಪಾಂಡ್ಯ 35, ಪಂತ್ 27 ರನ್ ಸಿಡಿಸಿದರು.