ಬೆಂಗಳೂರು, ಸೆ. 11 (DaijiworldNews/PY): ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ತನ್ನ ಬಹುಕಾಲದ ಆಸೆಯೊಂದನ್ನು ಈಡೇರಿಸಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನೀರಜ್ ಚೋಪ್ರಾ, "ಇಂದು ನನ್ನ ಬಹುದಿನದ ಕನಸು ನನಸಾಗಿದೆ. ನನ್ನ ಹೆತ್ತವರ ಮೊದಲ ವಿಮಾನ ಪ್ರಯಾಣದ ಆಸೆಯನ್ನು ನಾನು ಈಡೇರಿಸಿದ್ದು, ನನಗೆ ಸಂತಸವಾಗಿದೆ" ಎಂದು ತಿಳಿಸಿದ್ದಾರೆ.
ನೀರ್ ಚೋಪ್ರಾ ಅವರು ತಮ್ಮ ತಂದೆ-ತಾಯಿಯನ್ನು ವಿಮಾನ ಪ್ರಯಾಣ ಮಾಡಿಸಬೇಕು ಎಂದು ಕನಸು ಕಂಡಿದ್ದರಂತೆ. ಅದರಂತೆ ನೀರಜ್ ಚೋಪ್ರಾ ಅವರು ಶನಿವಾರ ಬೆಳಗ್ಗೆ ಖಾಸಗಿ ಜೆಟ್ನಲ್ಲಿ ತಮ್ಮ ತಂದೆ ಸತೀಶ್ ಕುಮಾರ್ ಹಾಗೂ ತಾಯಿ ಸರೋಜಾ ದೇವಿ ಅವರನ್ನು ವಿಮಾನ ಪ್ರಯಾಣ ಮಾಡಿಸಿದ್ದು, ತಮ್ಮ ಬಹುಕಾಲದ ಆಸೆಯನ್ನು ಈಡೇರಿಸಿದ್ದಾರೆ.
ನೀರಜ್ ಚೋಪ್ರಾ ಹಾಗೂ ಅವರ ತಂದೆ-ತಾಯಿ ಎಲ್ಲಿಂದ ಎಲ್ಲಿಯವರೆಗೆ ವಿಮಾಣ ಪ್ರಯಾಣ ಮಾಡಿದ್ದು ಎನ್ನುವ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.
"ನಿಮ್ಮ ಖುಷಿಯ ಮುಂದೆ ಬೇರೆ ಯಾವುದು ಸಮ ಅಲ್ಲ. ನಿಮಗೆ ಶುಭವಾಗಲಿ" ಎಂದು ನೀರಜ್ ಚೋಪ್ರಾ ಅವರ ಟ್ವೀಟ್ ಅನೇಕರು ಪ್ರತಿಕ್ರಿಯಿಸಿದ್ದಾರೆ.