ಟೋಕಿಯೊ, ಸೆ. 05 (DaijiworldNews/PY): ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ಹೆಚ್ 6 ವಿಭಾಗದಲ್ಲಿ ಕೃಷ್ಣ ನಗರ್ ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಎಸ್ಹೆಚ್ 6 ವಿಭಾಗದಲ್ಲಿ ಹಾಂಕಾಂಗ್ನ ಚು ಮನ್ ಕೈ ವಿರುದ್ದ ಗೆಲುವು ದಾಖಲಿಸಿದ ಕೃಷ್ಣ ನಗರ್ ಚಿನ್ನದ ಪದಕ ಗೆದ್ದಿದ್ದು, ಈ ಮೂಲಕ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ನಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯರಾಗಿದ್ಧಾರೆ.
ಮೂರು ಸುತ್ತಿನಲ್ಲೂ ಕೂಡಾ ಪ್ರಬಲ ಹೋರಾಟ ನಡೆಸಿದ ಕೃಷ್ಣ ನಗರ್ 21-17, 16-21 ಹಾಗೂ 21-17 ಅಂಕಗಳೊಂದಿಗೆ ಫೈನಲ್ನಲ್ಲಿ ಗೆಲವು ದಾಖಲಿಸಿದ್ದಾರೆ.