ಟೋಕಿಯೋ, ಸೆ 04 (DaijiworldNews/MS): ಭಾರತಕ್ಕೆ ಟೋಕಿಯೊ ಪ್ಯಾರಾಲಿಂಪಿಕ್ಸ್ ನ ನಾಲ್ಕನೇ ಚಿನ್ನದ ಪದಕ ಲಭಿಸಿದ್ದು, ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತೀಯ ಶಟ್ಲರ್ ಪ್ರಮೋದ ಭಗತ್ ಚಿನ್ನದ ಪದಕವನ್ನ ಗೆದ್ದು ಬೀಗಿದ್ದಾರೆ.
ಇನ್ನು ಮನೋಜ್ ಸರ್ಕಾರ್ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಮೋದ್ ಭಗತ್ ಹಾಗೂ ಮನೋಜ್ ಸರ್ಕಾರ ತಲಾ 2-0 ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.
ಫೈನಲ್ʼನಲ್ಲಿ ಗ್ರೇಟ್ ಬ್ರಿಟನ್ʼನ ಡೇನಿಯಲ್ ಬೆಥೆಲ್ ಅವರನ್ನ ಸೋಲಿಸಿ ಪ್ರಮೋದ ಭಗತ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಅಗ್ರ ಶ್ರೇಯಾಂಕಿತ ಪ್ರಮೋದ್ ಮೊದಲ ಪಂದ್ಯವನ್ನು ಕೇವಲ 21 ನಿಮಿಷಗಳಲ್ಲಿ 21-14ರಿಂದ ಸೋಲಿಸುವ ಮೂಲಕ ತಮ್ಮ ಅಜೇಯ ಓಟವನ್ನ ಮುಂದುವರಿಸಿದರು.
ಒಟ್ಟಾರೆ ಪ್ರಮೋದ್ ಭಗತ್ 21-14, 21-17 ಅಂಕಗಳಿಂದ ಗ್ರೇಟ್ ಬ್ರಿಟನ್ನ ಡೇನಿಯಲ್ ಬೆಥನಿಲ್ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ
ಇನ್ನು ಕಂಚಿನ ಪದಕಕ್ಕಾಗಿ ನಡೆದ ಕಾದಾಟದಲ್ಲಿ ಮನೋಜ್ ಸರ್ಕಾರ್ ಜಪಾನಿನ ಡೈಸುಕಿ ಫ್ಯುಸಿಹರ ಎದುರು 22-20, 21-13 ಅಂಕಗಳಿಂದ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕ ತಮ್ಮದಾಗಿಸಿದರು.