ನವದೆಹಲಿ, ಆ. 22 (DaijiworldNews/SM): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಆಟವನ್ನು ಎಲ್ಲರೂ ನೆಚ್ಚಿಕೊಳ್ಳುತ್ತಾರೆ. ಅವರದ್ದೇ ಆದ ಅಭಿಮಾನಿ ಬಳಗವೂ ಇದೆ. ಈ ನಡುವೆ ಅವರ ಕೆಲವು ಸ್ವಭಾವಗಳು ಎಲ್ಲರಿಗೂ ಹಿಡಿಸುವುದಿಲ್ಲ. ಮಾಜಿ ಕ್ರಿಕೆಟಿಗ ಫರೋಖ್ ಇಂಜಿನಿಯರ್ ಕೂಡ ಇದೇ ವಿಚಾರ ಹೇಳಿದ್ದು, ವಿರಾಟ್ ಅವರ ಬ್ಯಾಟಿಂಗ್ ಮೆಚ್ಚುತ್ತೇನೆ ಆದರೆ, ಆಕ್ರಮಣಶೀಲ ಮನಸ್ಥಿತಿ ನಿಯಂತ್ರಣದಲ್ಲಿದ್ದರೆ ಉತ್ತಮ ಎಂದಿದ್ದಾರೆ.
ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 151 ರನ್ ಗಳ ಜಯ ಸಾಧಿಸಿತ್ತು. ಈ ವೇಳೆ ಕೊಹ್ಲಿ ಜೇಮ್ಸ್ ಆಂಡರ್ಸನ್ ಜೊತೆ ಮಾತಿನ ಜಗಳ ನಡೆಸಿದ್ದರು. ಇಂತಹ ಹಲವು ಘಟನೆಗಳಿಗೆ ವಿರಾಟ ಸಾಕ್ಷಿಯಾಗಿದ್ದಾರೆ. ಇನ್ನೊಂದೆಡೆ ಇಂಗ್ಲೆಂಡ್ ನ ಮಾಜಿ ಆಟಗಾರರೊಬ್ಬರು ಈ ಹಿಂದೆ ಕೊಹ್ಲಿ ಸ್ವಭಾವವನ್ನು ಟೀಕಿಸಿದ್ದರು.
ಪಂದ್ಯಗಳನ್ನು ಗೆಲ್ಲಿಸಿಕೊಡುವ ಸಾಮಾರ್ಥ್ಯ ಕೊಹ್ಲಿಗಿದೆ. ಉತ್ತಮ ನಾಯಕತ್ವದ ಗುಣವಿದೆ ಎಂದು ಫರೋಖ್ ಹೇಳಿದ್ದಾರೆ. ಆದರೆ, ಆಕ್ರಮಣಕಾರಿ ಸ್ವಾಭಾವ ನಿಯಂತ್ರಣದಲ್ಲಿರಬೇಕು ಎಂದು ಅವರು ಹೇಳಿದ್ದಾರೆ.