ಟೋಕಿಯೋ ಅ 01 (DaijiworldNews/MS):ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ ಭಾರತದ ಪಾಟಿಯಾಲದ ಕಮಲ್ ಪ್ರೀತ್ ಕೌರ್ ಅವರು ಫೈನಲ್ಗೆ ಪ್ರವೇಶ ಪಡೆಯುವ ಮೂಲಕ ಪದಕ ಗಳಿಸುವ ಭರವಸೆ ಮೂಡಿಸಿದ್ದು, ಇಂದು ಮತ್ತೆ ಅಂತಹದ್ದೇ ಅತ್ಯುತ್ತಮ ಪ್ರದರ್ಶನ ನೀಡಿ ಪದಕ ಗಳಿಸಿಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಭಾರತೀಯರಿದ್ದಾರೆ.
ಹೌದು ಮಹಿಳೆಯರ ಡಿಸ್ಕಸ್ ಥ್ರೋ ವಿಭಾಗದಲ್ಲಿ 64 ಮೀ. ದೂರ ಎಸೆದು ಎರಡನೇ ಸ್ಥಾನಿಯಾಗಿ ಫೈನಲ್ ಗೆ ಅರ್ಹತೆ ಪಡೆದಿದ್ದ ಭಾರತದ ಕಮಲ್ ಪ್ರೀತ್ ಇಂದು ಫೈನಲ್ ಆಡಲಿದ್ದಾರೆ.
ಚೊಚ್ಚಲ ಒಲಿಂಪಿಕ್ಸ್ ನಲ್ಲೇ 64 ಮೀ. ದೂರ ಎಸೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಇಂದು ಸಂಜೆ ಭಾರತೀಯ ಕಾಲಮಾನ ಪ್ರಕಾರ 4.30 ಕ್ಕೆ ಈ ಪಂದ್ಯ ನಡೆಯಲಿದೆ. ಕಮಲ್ ಪ್ರೀತ್ ಸೇರಿದಂತೆ ಒಟ್ಟು 12 ಸ್ಪರ್ಧಿಗಳು ಕಣದಲ್ಲಿದ್ದಾರೆ.
ಡಿಸ್ಕಸ್ ಥ್ರೋನ ಅರ್ಹತಾ ಸುತ್ತಿನಲ್ಲಿ 32 ಮಂದಿ ಅಥ್ಲೀಟ್ಗಳು ಪಾಲ್ಗೊಂಡಿದ್ದರೂ ಕೂಡ ಎರಡು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಕೋರಿಕೊದ ಸಂದರಾ ಪಿರ್ಕೋವಿಕ್ಸ್ (63.75 ಮೀಟರ್) ಗಿಂತ ಉತ್ತಮ ಪ್ರದರ್ಶನ ತೋರಿ 64.0 ಮೀಟರ್ ದೂರ ಡಿಸ್ಕಸ್ ಎಸೆದರೆ, ಅಮೆರಿಕಾದ ಅಲ್ ಮನ್ ವಲ್ಲರಿಯಾ ಅವರು ಮೊದಲ ಎಸೆತದಲ್ಲೇ 66.42 ಮೀಟರ್ ಎಸೆಯುವ ಮೂಲಕ ಫೈನಲ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು