ಟೋಕಿಯೋ, ಜು 31(DaijiworldNews/MS): ಟೋಕಿಯೋ ಒಲಿಂಪಿಕ್ಸ್ 2020 ರ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಭಾರತದ ಕಮಲ್ಪ್ರೀತ್ ಕೌರ್ ಅಂತಿಮ ಸುತ್ತು ಪ್ರವೇಶಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಪದಕದ ಭರವಸೆಯನ್ನು ಮೂಡಿಸಿದ್ದಾರೆ.
64.00 ಮೀಟರ್ ದೂರದವರೆಗೆ ಡಿಸ್ಕಸ್ ಥ್ರೋ ಹಾರಿಸುವ ಮೂಲಕ ಅಂತಿಮ ಸುತ್ತು ಪ್ರವೇಶಿಸುವ ಮೂಲಕ ಭಾರತದ ಕಮಲ್ ಪ್ರೀತ್ ಕೌರ್ ಈ ಬಾರಿಯ ಒಲಿಂಪಿಕ್ ನಲ್ಲಿ ಅಂತಿಮ ಸುತ್ತು ಪ್ರವೇಶಿಸಿದ ಎರಡನೇ ಆಟಗಾರ್ತಿಯಾಗಿದ್ದಾರೆ. ಅಮೆರಿಕಾದ ವಲರೈ ಅಲ್ಲಮ್ ಕೂಡ ಅಂತಿಮ ಸುತ್ತು ಪ್ರವೇಶಿಸಿದ್ದಾರೆ.
ಕಮಲ್ಪ್ರೀತ್ ಅವರು ಮೊದಲ ಪ್ರಯತ್ನದಲ್ಲಿ 6029 ಮೀ., ಎರಡನೇ ಪ್ರಯತ್ನದಲ್ಲಿ 63.97 ಮೀ. ಮತ್ತು ಅಂತಿಮ ಪ್ರಯತ್ನದಲ್ಲಿ 64.00 ಮೀಟರ್ ಎಸೆದು ಅತ್ಯುತ್ತಮ ಪ್ರದರ್ಶನ ನೀಡಿದರು. ಆಗಸ್ಟ್ 2 ರಂದು ಫೈನಲ್ ಪಂದ್ಯ ನಡೆಯಲಿದೆ.