ಟೋಕಿಯೋ, ಜು 30 (DaijiworldNews/MS): ಟೋಕಿಯೊ ಒಲಂಪಿಕ್ಸ್ನಲ್ಲಿ ಆರ್ಚರಿಯಲ್ಲಿ ಮಹಿಳೆಯರ ವೈಯಕ್ತಿಕ ವಿಭಾಗದ ಕ್ವಾರ್ಟರ್ ಫೈನಲ್ ನಲ್ಲಿ ಭಾರತೀಯ ಸ್ಪರ್ಧಿ ದೀಪಿಕಾ ಕುಮಾರಿ ಸೋಲನನುಭವಿಸಿದ್ದು, ಪದಕ ಗೆಲ್ಲುವ ಹಂಬಲ ಭಗ್ನವಾಗಿದೆ.
ಟೋಕಿಯೊ ಒಲಂಪಿಕ್ಸ್ನ 8ನೇ ದಿನವಾದ ಶುಕ್ರವಾರ (ಜು.30) ಭಾರತದ ದೀಪಿಕಾ ಕುಮಾರಿ ಮಹಿಳಾ ಸಿಂಗಲ್ಸ್ ಆರ್ಚರಿ ಪಂದ್ಯವೊಂದರಲ್ಲಿ ರಷ್ಯಾ ಒಲಿಂಪಿಕ್ ಕಮಿಟಿಯ ಆಟಗಾರ್ತಿ ಕ್ಸೆನಿಯಾ ಪೆರೋವಾ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದರು.
ಆದರೆ ಇದೀಗ ತಾನೆ ಕೊನೆಕೊಂಡ ಪಂದ್ಯದಲ್ಲಿ ದೀಪಿಕಾ ದಕ್ಷಿಣ ಕೊರಿಯಾದ ಅನ್ ಸ್ಯಾನ್ ವಿರುದ್ಧ 6-0 ಅಂತರದಿಂದ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ದೀಪಿಕಾರ ಟೋಕಿಯೋ ಒಲಿಂಪಿಕ್ ಪ್ರಯಾಣ ಕೂಡಾ ಕೊನೆಗೊಂಡಿದೆ.