ಟೊಕಿಯೋ, ಜು 29 (DaijiworldNews/MS): ಒಲಿಂಪಿಕ್ ಪದಕದ ಹೋರಾಟದಲ್ಲಿ ಕೊಲಂಬಿಯಾದ ಇಂಗ್ರಿಟ್ ವಿಕ್ಟೋರಿಯಾ ವೇಲೆನ್ಸಿಯಾ ವಿರುದ್ಧ ಗುರುವಾರ ಸೋತ ನಂತರ ಬಾಕ್ಸಿಂಗ್ ಶ್ರೇಷ್ಠ ಎಂಸಿ ಮೇರಿ ಕೋಮ್ ಟೋಕಿಯೊ ಒಲಿಂಪಿಕ್ಸ್ನಿಂದ ನಿರ್ಗಮಿಸಿದರು.
ಆರು ಬಾರಿಯ ವಿಶ್ವ ಚಾಂಪಿಯನ್ ಪಡೆದು ಭಾರತದ ಭರವಸೆಯಾಗಿದ್ದ ಮೇರಿ ಕೋಮ್ ಟೋಕಿಯೊ ಒಲಿಂಪಿಕ್ಸ್ ಪ್ರಿ-ಕ್ವಾರ್ಟರ್ಫೈನಲ್ನಲ್ಲಿ ಸೋಲು ಅನುಭವಿಸಿದ್ದಾರೆ.
ಮಹಿಳೆಯರ 51 ಕೆ.ಜಿ.ವಿಭಾಗದಲ್ಲಿ 16ರ ಸುತ್ತಿನ ಹೋರಾಟದಲ್ಲಿ ಮೇರಿ ಕೋಮ್, ಕೊಲಂಬಿಯಾದ ಇಂಗ್ರಿಟ್ ವಲೆನ್ಸಿಯಾ ವಿರುದ್ಧ 2-3ರಿಂದ ಸೋಲು ಅನುಭವಿಸಿದ್ದಾರೆ
ವಿಚಿತ್ರವೆಂದರೆ, ಮೇರಿ ಕೋಮ್ ಭಾರತ ಅಥವಾ ಅವರ ಹೆಸರನ್ನು ಹೊಂದಿರದ ಸರಳ ನೀಲಿ ಬಣ್ಣದ ಜರ್ಸಿ ಧರಿಸಿದ್ದರು
2021ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್ ಮೊದಲ ರೌಂಡ್ನಲ್ಲಿ 1-4ರ ಹಿನ್ನಡೆ ಅನುಭವಿಸಿದರು. ಬಳಿಕ ದಿಟ್ಟ ಹೋರಾಟ ನೀಡಿದರೂ ಯಶಸ್ಸು ಒಲಿದುಬರಲಿಲ್ಲಪಂದ್ಯ ಮುಗಿದ ಬಳಿಕ ಮೇರಿ ಕೋಮ್ ಅತ್ಯಂತ ಭಾವುಕರಾದರು.