ಕೊಲಂಬೊ, ಜು. 25 (DaijiworldNews/SM): ಇಲ್ಲಿ ನಡೆದ ಭಾರತ ಹಾಗೂ ಲಂಕಾ ವಿರುದ್ಧ ಮೊದಲ ಟಿ-೨೦ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಪಡೆ 38 ರನ್ ಗಳ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಇಪ್ಪತ್ತು ಓವರ್ ಗಳಲ್ಲಿ ಐದು ವಿಕೆಟ್ ಗಳ ನಷ್ಟಕ್ಕೆ 164 ರನ್ ಗಳಿಸಿತು. ಸೂರ್ಯ ಕುಮಾರ್ ಯಾದವ್ 50, ನಾಯಕ ಧವನ್ 46 ರನ್ ಸಿಡಿಸಿದರು.
ಇನ್ನು ಇದಕ್ಕೆ ಉತ್ತರವಾಗಿ ಲಂಕಾ ಪಡೆ 18.3 ಓವರ್ ಗಳಲ್ಲಿ 126 ರನ್ ಗಳಿಗೆ ಸರ್ವ ಪತನಗೊಂಡಿತು. ಲಂಕಾ ಪರ ಚರಿತ್ ಅಸಲಂಕಾ 44 ರನ್ ಸಿಡಿಸಿದರು. ಮಾರಕ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ 4, ದೀಪಕ್ ಚಾಹರ್ 2 ವಿಕೆಟ್ ಪಡೆದರು.