ಲಂಡನ್, ಜು.03 (DaijiworldNews/HR): ಭಾರತದ ಟೆನ್ನಿಸ್ ಸ್ಟಾರ್ ದಿವಿಜ್ ಶರಣ್ ಹಾಗೂ ಅವರ ಪತ್ನಿ, ಟೆನ್ನಿಸ್ ಆಟಗಾರ್ತಿ ಸಮಂತಾ ಮರ್ರೆ ಅವರ ಜೊತೆಗೂಡಿ ಮಿಶ್ರ ಡಬಲ್ಸ್ ಪಂದ್ಯದಲ್ಲಿ ಆಡಿ ಗೆದ್ದಿದ್ದಾರೆ.
ದಿವಿಜ್ ಶರಣ್ ಮತ್ತು ಅವರ ಪತ್ನಿ ಸಮಂತಾ ಮುರ್ರೆ ಶರಣ್ ಜೋಡಿ ವಿಂಬಲ್ಡನ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಶುಕ್ರವಾರ ತಮ್ಮ ಮೊದಲ ಸುತ್ತಿನ ಮಿಶ್ರ ಡಬಲ್ಸ್ ಪಂದ್ಯವನ್ನು ಜಯಗಳಿಸಿದ್ದಾರೆ.
ಮಿಶ್ರ ಡಬಲ್ಸ್ ಪಂದ್ಯದಲ್ಲಿ ಶರಣ್ ಮತ್ತು ಸಮಂತಾ ಮರ್ರೆ ಅವರು ಉರುಗ್ವೆಯ ಏರಿಯಲ್ ಬೆಹರ್ ಮತ್ತು ಕಝಕ್ ಗಲಿನಾ ವೊಸ್ಕೊಬೊವಾ ಅವರನ್ನು 6-3, 5-7, 6-4 ಸೆಟ್ಗಳಿಂದ ಸೋಲಿಸಿ ಗೆದ್ದಿದ್ದಾರೆ.
ಈ ತಾರಾ ಜೋಡಿ 2012ರಲ್ಲಿ ಬಳಿಕ ಪರಿಚಯವಾಗಿ ಪ್ರೇಮವಾಗಿ ಮದುವೆಗೆ ತಿರುಗಿತ್ತು. ಈ ಜೋಡಿ 8 ವರ್ಷಗಳಿಂದ ಒಟ್ಟಿಗೆ ಇದ್ದು 2019ರಲ್ಲಿ ಜುಲೈನಲ್ಲಿ ಮ್ಯಾಂಚೆಸ್ಟರ್ನಲ್ಲಿ ಈ ಜೋಡಿ ರಿಜಿಸ್ಟರ್ ಮದುವೆಯಾಗಿತ್ತು. ಬಳಿಕ ನವೆಂಬರ್ ನಲ್ಲಿ ಭಾರತದಲ್ಲೂ ಈ ಜೋಡಿ ಮದುವೆಯಾಗಿ ಆರತಕ್ಷತೆ ನೀಡಿತ್ತು.
ವಿಂಬಲ್ಡನ್ ಟೂರ್ನಿಯಲ್ಲಿ ಆಡಲು ಈ ಜೋಡಿ ಮುಂದಾಗಿದ್ದು, 2014ರಲ್ಲಿ ಟೂರ್ನಿಗೆ ಈ ಜೋಡಿ ಸಹಿ ಮಾಡಿತ್ತಾದರೂ ಜೋಡಿಯಾಗಿ ಆಡಲು ಸಾಧ್ಯವಾಗಿರಲಿಲ್ಲ.
ಇನ್ನು ಇದೀಗ 7 ವರ್ಷಗಳ ಬಳಿಕ ದಿವಿಜ್ ಶರಣ್ ಹಾಗೂ ಸಮಂತಾ ಮರ್ರೆ ಜೊತೆಗೂಡಿ ಆಡಿದ್ದಾರೆ.