ಬುಡಾಪೆಸ್ಟ್, ಜು. 01(DaijiworldNews/HR): ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆದ ಪಂದ್ಯದಲ್ಲಿ ಜಯಗಳಿಸಿ ಇತಿಹಾಸದ ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ಎಂಬ ದಾಖಲೆಯನ್ನು ಭಾರತ ಮೂಲದ 12 ವರ್ಷದ ಬಾಲಕ ಅಭಿಮನ್ಯು ಮಿಶ್ರಾ ಚೆಸ್ ಬರೆದಿದ್ದಾರೆ.
ಅಭಿಮನ್ಯು ಮಿಶ್ರಾ 19 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದು, 2002ರ ಆಗಸ್ಟ್ 12ರಂದು ಕಜಕಿಸ್ತಾನದ ಸರ್ಗೆ ಕರ್ಜಾಕಿನ್ ಅವರು ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ದಾಖಲೆ ಬರೆದಿದ್ದರು.
ಇನ್ನು ಈ ವೇಳೆ ಸರ್ಗೆ ಕರ್ಜಾಕಿನ್ ಗೆ 12 ವರ್ಷ ಏಳು ತಿಂಗಳು ಪ್ರಾಯವಾಗಿದ್ದು, ಈ ದಾಖಲೆಯನ್ನು 12 ವರ್ಷ ನಾಲ್ಕು ತಿಂಗಳು ಪ್ರಾಯದ ಅಭಿಮನ್ಯು ಮಿಶ್ರಾ ಮುರಿದಿದ್ದಾರೆ.
ಅಮೇರಿಕಾದಲ್ಲಿ ಜನಿಸಿರುವ ಅಭಿಮನ್ಯು ಭಾರತೀಯ ಮೂಲದವರಾಗಿದ್ದು, ಕಳೆದ ಕೆಲವು ತಿಂಗಳಿನಿಂದ ಹಂಗೇರಿಯ ಬುಡಾಪೆಸ್ಟ್ ನಲ್ಲಿ ಸತತ ಕೂಟಗಳಲ್ಲಿ ಅಭಿಮನ್ಯು ಮಿಶ್ರಾ ಆಡುತ್ತಿದ್ದಾರೆ.