ಸೌತಾಂಪ್ಟನ್, ಜೂ. 23 (DaijiworldNews/SM): ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ವಿರುದ್ದ ನ್ಯೂಜಿಲ್ಯಾಂಡ್ ತಂಡ ಎಂಟು ವಿಕೆಟ್ ಗಳಿಂದಗೆದ್ದುಕೊಂಡು ಟೆಸ್ಟ್ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ ಕೇವಲ 170 ರನ್ ಗಳಿಗೆ ಸರ್ವ ಪತನಗೊಂಡಿತು. ಆ ಮೂಲಕ ನ್ಯೂಜಿಲ್ಯಾಂಡ್ ತಂಡಕ್ಕೆ ಗೆಲ್ಲಲು 139 ರನ್ ಗಳ ಗುರಿ ನೀಡಿತ್ತು. ಈ ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ತಂಡಕ್ಕೆ ರಾಸ್ ಟೇಲರ್ ಹಾಗೂ ಕೇನ್ ವಿಲಿಯಂಸನ್ ನೆರವಾದರು.
ಇನ್ನು ಈ ಹಿಂದೆ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡದ ಮೇಲೆ ಭಾರೀ ನಿರೀಕ್ಷೆ ಹೊಂದಲಾಗಿತ್ತು. ಕೊಹ್ಲಿ ಹುಡುಗರು ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ವ್ಯಕ್ತವಾಗಿತ್ತು. ಆದರೆ, ಅಭಿಮಾನಿಗಳ ಭರವಸೆ ಹುಸಿಯಾಗಿದೆ. ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 217 ರನ್ ಗಳನ್ನಷ್ಟೇ ಪೇರಿಸಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲ್ಯಾಂಡ್ 249 ರನ್ ಗಳಿಗೆ ಆಲೌಟ್ ಆಗುವ ಮೂಲಕ 32 ರನ್ ಗಳ ಮುನ್ನಡೆ ಸಾಧಿಸಿತ್ತು.
ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 170 ರನ್ ಗಳಿಗೆ ಆಲೌಟ್ ಆಗಿತ್ತು.