ಟೋಕಿಯೋ, ಜೂ. 1 (DaijiworldNews/SM): ಗಾಯದ ಸಮಸ್ಯೆಯಿಂದಾಗಿ ಬ್ಯಾಡ್ಮಿಂಟನ್ನ ಸಿಂಗಲ್ಸ್ ನ ಕಳೆದ ವರ್ಷದ ಚಾಂಪಿಯನ್ ಸ್ಪೇನ್ನ ಕರೋಲಿನಾ ಮರಿನ್ ಟೋಕಿಯೋ ಕೂಟದಿಂದಲೇ ಹೊರಗುಳಿದಿದ್ದಾರೆ. ಇದು ಭಾರತದ ಸಿಂಧು ಅವರಿಗೆ ವರದಾನವಾಗುವ ಸಾಧ್ಯತೆ ಇದೆ.
ವಿಶ್ವ ಪ್ರಸಿದ್ಧ ಬ್ಯಾಡ್ಮಿಂಟನ್ ಪಟು ಕರೋಲಿನಾ ಮರಿನ್ ಮೊಣಕಾಲಿನ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರಗುಳಿದಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಈ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳಾ ವಿಭಾಗದ ಸಿಂಗಲ್ಸ್ನಲ್ಲಿ 2016ರಲ್ಲಿ ನಡೆದ ಕೂಟದಲ್ಲಿ ಸಿಂಧು ಅವರನ್ನು ಮಣಿಸಿ ಮರಿನ್ ಸ್ವರ್ಣ ಬಾಚಿಕೊಂಡಿದ್ದರು. ಇನ್ನು ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ಮರಿನ್ ಅವರು ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕೂಟದಲ್ಲಿ ಪಾಲ್ಗೊಳ್ಳಲು ಅಸಾಧ್ಯ ಎಂದು ಹೇಳಿದ್ದಾರೆ.