ದುಬೈ, ಮೇ 23 (DaijiworldNews/SM): ಕೊರೋನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿ ಪದೇ ಪದೇ ಬದಲಾಗುತ್ತಿವೆ. ಈಹಿನ್ನೆಲೆಯಲ್ಲಿ 2021ರ ಏಷ್ಯಾಕಪ್ ಟೂರ್ನಿಯನ್ನು ಮುಂದೂಡಲಾಗಿದೆ. ಹಾಗೂ ಬಹುತೇಕ 2023ರಲ್ಲಿ ನಡೆಯುವ ಸಾಧ್ಯತೆ ಇದೆ.
ಈ ವರ್ಷದ ಕಾಂಟಿನೆಂಟಲ್ ಪಂದ್ಯಾವಳಿಯನ್ನು ಸ್ಥಳಾಂತರಿಸಲಾಯಿತು. ಪಾಕಿಸ್ತಾನದಿಂದ ಶ್ರೀಲಂಕಾಕ್ಕೆ ವರ್ಗಾಯಿಸಲಾಗಿದೆ. ಆದರೆ ಲಂಕಾದಲ್ಲೂ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಕಾರಣದಿಂದಾಗಿ ಟೂರ್ನಿ ರದ್ದಾಗಿದೆ. ಏಷ್ಯಾಕಪ್ ಆಡಲಿರುವ ಎಲ್ಲಾ ನಾಲ್ಕು ತಂಡಗಳ ವೇಳಾಪಟ್ಟಿ ವರ್ಷದ ಅಂತ್ಯದವರೆಗೆ ನಿಗದಿಯಾಗಿರುವುದರಿಂದ ಈ ವರ್ಷ ಪಂದ್ಯಾವಳಿಗಾಗಿ ವೇಳಾಪಟ್ಟಿ ಹೊಂದಿಸುವುದು ತುಂಬಾ ಕಷ್ಟಕರವಾಗಿದೆ.
"ಮಂಡಳಿ ಈ ವಿಷಯವನ್ನು ಬಹಳ ಎಚ್ಚರಿಕೆಯಿಂದ ಪರಿಗಣಿಸಿದ್ದು ಟೂರ್ನಿಯನ್ನು ಮುಂದೂಡುವುದೊಂದೆ ಮುಂದಿನ ಆಯ್ಕೆ ಎನ್ನುವ ನಿರ್ಧಾರಕ್ಕೆ ಬರಲಾಗಿದೆ. 2018ರಿಂದ ಏಷ್ಯಾ ಕಪ್ ನಡೆದಿಲ್ಲ. 2020ರ ಟೂರ್ನಿಗೆ ಕೊರೋಣಾ ಕರಿನೆರಳು ಬೀರಿದೆ. ಈ ಟೂರ್ನಿ ಮುಂದೂಡಲ್ಪಟ್ಟಿದೆ. ಇದೀಗ ಟೂರ್ನಿ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ.