ಮುಂಬೈ, ಮೇ.15 (DaijiworldNews/PY): ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಬಿಸಿಸಿಐ ಪ್ರಕಟಿಸಲಾಗಿದ್ದು, ಏಕದಿನ ಹಾಗೂ ಟೆಸ್ಟ್ ತಂಡವನ್ನು ಮಿಥಾಲಿ ರಾಜ್ ಅವರು ಮುನ್ನಡೆಸಿದರೆ, ಟಿ20 ತಂಡವನ್ನು ಹರ್ಮನ್ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.
ಭಾರತ ತಂಡವು ಜೂನ್ 16ರಂದು ಬ್ರಿಸ್ಟಲ್ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ದದ ಏಕೈಕ ಟೆಸ್ಟ್ ಪಂದ್ಯವನ್ನು ಆಡಲಿದೆ. ಎಂಟು ದಿನಗಳ ಬಳಿಕ ಏಕದಿನ ಸರಣಿಯು ಆರಂಭವಾಗಲಿದ್ದು, 3 ಏಕದಿನ ಪಂದ್ಯಗಳು ನಡೆಯಲಿವೆ. ಜುಲೈ 6ರಿಂದ 3 ಟಿ 20 ಪಂದ್ಯಗಳ ಸರಣಿಯು ಆರಂಭವಾಗಲಿದೆ.
ಏಕದಿನ ಟೆಸ್ಟ್ ಪಂದ್ಯದಲ್ಲಿ ಯಾರಿಗೆಲ್ಲಾ ಸ್ಥಾನ?
ಮಿಥಾಲಿ ರಾಜ್(ನಾಯಕಿ), ಸ್ಮೃತಿ ಮಂಧನಾ, ಹರ್ಮನ್ಪ್ರೀತ್ ಕೌರ್ (ಉಪನಾಯಕಿ), ಪೂನಂ ರಾವತ್, ಪ್ರಿಯಾ ಪೂನಿಯಾ, ದೀಪ್ತಿ ಶರ್ಮಾ, ಜೆಮಿಯಾ ರೋಡ್ರಿಗಸ್, ಶಫಾಲಿ ವರ್ಮಾ, ಸ್ನೇಹ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಇಂದ್ರಾಣಿ ರಾಯ್ (ವಿಕೆಟ್ ಕೀಪರ್), ಜುಲಾನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ಪೂನಂ ಯಾದವ್, ಏಕ್ತಾ ಬಿಶ್ತ್, ರಾಧಾ ಯಾದವ್.
ಟಿ 20 ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದನ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಶೆಫಾಲಿ ವರ್ಮಾ, ರಿಚಾ ಘೋಷ್, ಹರ್ಲೀನ್ ಡಿಯೋಲ್, ಸ್ನೇಹ್ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಇಂದ್ರಾಣಿ ರಾಯ್ (ವಿಕೆಟ್ ಕೀಪರ್), ಶಿಖಾ ಪಾಂಡೇಂದ್ರ, ಪೂಜಾ ಅರ್ವಾಂಡಂ , ಏಕ್ತಾ ಬಿಶ್ತ್, ರಾಧಾ ಯಾದವ್ ಹಾಗೂ ಸಿಮ್ರಾನ್ ದಿಲ್ ಬಹದ್ದೂರ್.
ವಿಶ್ವದ ನಂ1 ಬ್ಯಾಟ್ಸ್ಮನ್ ಆಗಿರುವ 17 ವರ್ಷದ ಶಫಾಲಿ ವರ್ಮಾ ಅವರು ಏಕದಿನ ತಂಡದಲ್ಲಿ ಪ್ರಥಮ ಬಾರಿಗೆ ಸ್ಥಾನ ಪಡೆದಿದ್ದಾರೆ. ಅಲ್ಲದೇ, ಟೆಸ್ಟ್ ತಂಡದಲ್ಲೂ ಕೂಡಾ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೊಂದೆಡೆ ಶಿಖಾ ಪಾಂಡೆ ಹಾಗೂ ತಾನಿಯಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ.
ಸ್ಪಿನ್ ಬೌಲಿಂಗ್-ಆಲ್ರೌಂಡರ್ 27 ವರ್ಷದ ಸ್ನೇಹ್ ರಾಣಾ ಅವರು ಐದು ವರ್ಷಗಳ ಬಳಿಕ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಸ್ನೇಹ್ ರಾಣಾ ಅವರು 2016 ರ ಫೆಬ್ರವರಿಯಲ್ಲಿ ಏಕದಿನ ಮತ್ತು ಟಿ 20 ಪಂದ್ಯಗಳನ್ನು ಆಡಿದ್ದರು.