ನವದೆಹಲಿ, ಮೇ 04 (DaijiworldNews/SM): ಕೊರೋನಾ ಸೋಂಕು ವಕ್ಕರಿಸಿಕೊಂಡಿರುವುದರಿಂದ ಐಪಿಎಲ್ ಪಂದ್ಯಗಳನ್ನು ರದ್ದುಗೊಳಿಸಲಾಗಿದ್ದು, ಉಳಿದ ಪಂದ್ಯಗಳು ವಿದೇಶಿ ಅಂಗಳದಲ್ಲಿ ನಡೆಯುವ ಸಾಧ್ಯತೆ ಇದೆ. ಮುಂದಿನ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲು ಸಕಲ ಸಿದ್ಧತೆಗಳು ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದಕ್ಕೆ ಕಾರಣ ಅಕ್ಟೋಬರ್-ನವೆಂಬರ್ ನಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಬೇಕಿದೆ. ಆದರೆ ನವೆಂಬರ್ ನಲ್ಲಿ ಕೊರೋನಾ ಮೂರನೇ ಅಲೆ ಸಂಭವ ಸಾಧ್ಯತೆ ಇರುವುದರಿಂದ ಭಾರತೀಯ ಕ್ರಿಕೆಟ್ ಮಂಡಳಿ ಮತ್ತಷ್ಟು ಆತಂಕಕ್ಕೆ ಒಳಗಾಗಿದೆ.
ಭಾರತದಲ್ಲಿ ನವೆಂಬರ್ ನಲ್ಲಿ ಮೂರನೇ ಅಲೆ ಎದುರಾಗುವ ಸಾಧ್ಯತೆಗಳು ಹೆಚ್ಚಿಗಿದೆ. ಪಂದ್ಯಾವಳಿ ಬಹುಶಃ ಯುಎಇಗೆ ಬದಲಾಗಲಿದ್ದು ಭಾರತವೇ ಟೂರ್ನಿಗೆ ಆತಿಥ್ಯ ವಹಿಸಲಿದೆ ಎಂದು ಮಾಹಿತಿ ಲಭ್ಯವಾಗಿದೆ.