ನವದೆಹಲಿ, ಎ.28 (DaijiworldNews/PY): ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರು ಕೊರೊನಾ ವಿರುದ್ದದ ಹೋರಾಟಕ್ಕೆ ಒಂದು ಬಿಟ್ ಕಾಯಿನ್ (ಸುಮಾರು 40 ಲಕ್ಷ ರೂ.) ದೇಣಿಗೆ ನೀಡಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ತಿಳಿಸಿರುವ ಅವರು, ಭಾರತದ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಗಾಗಿ ಬಿಟ್ ಕಾಯಿನ್ ನೀಡುವುದಾಗಿ ತಿಳಿಸಿದ್ದಾರೆ.
"ಕೊರೊನಾದಿಂದ ಜನರು ಕಂಗಾಲಾಗಿರುವುದನ್ನು ಕಂಡು ನನಗೆ ಬೇಸರವಾಗಿದೆ. ನಾನು ಭಾರತದಾದ್ಯಂತ ಆಸ್ಪತ್ರೆಗಳಿಗೆ ಆಕ್ಸಿಜನ್ ಖರೀದಿ ಮಾಡಲು ಒಂದು ಬಿಟ್ ಕಾಯಿನ್ ಅನ್ನು ದೇಣಿಗೆಯಾಗಿ ನೀಡಲು ಇಚ್ಛಿಸಿದ್ದೇನೆ" ಎಂದಿದ್ದಾರೆ.
ಪ್ರಸ್ತುತ ಬ್ರೆಟ್ ಲೀ ಅವರು ವೀಕ್ಷಣೆ ವಿವರಣೆಕಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.