ಚೆನೈ, ಎ.22 (DaijiworldNews/PY): ಐಪಿಎಲ್ ಸೀಸನ್ 2021ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಅಂತಿಮವಾಗಿ ಗೆಲುವಿನ ಖಾತೆ ತೆರೆದಿದ್ದು, ಎಸ್ಆರ್ಹೆಚ್ ಟೀಂ ಸಿಇಒ ಕವಿಯಾ ಮಾರನ್ ಖುಷಿ ಪಟ್ಟಿದ್ದಾರೆ. ಕವಿಯಾ ಮಾರನ್ ಅವರ ಖುಷಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡ್ ಮಾಡುತ್ತಿದೆ.
ಎಸ್ಆರ್ಹೆಚ್ ಟೀಂ ಸಿಇಒ ಕವಿಯಾ ಮಾರನ್ ಅವರು ಸನ್ ಗ್ರೂಪ್ ಮಾಲೀಕ ಕಲಾನಿತಿ ಮಾರನ್ ಅವರ ಪುತ್ರಿ. ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಅವರ ಸೋದರ ಸೊಸೆ. ಇವರು ಸದ್ಯ ನಡೆಯುತ್ತಿರುವ ಐಪಿಎಲ್ನ ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾಗಿದ್ದಾರೆ.
28 ವರ್ಷದ ಕವಿಯಾ ಮಾರನ್ ಅವರು ಸ್ವತಃ ಸನ್ ಮ್ಯೂಸಿಕ್ನಲ್ಲಿ ಕೂಡಾ ಪಾಲುದಾರಿಕೆ ಹೊಂದಿದ್ದಾರೆ. 2018ರಲ್ಲಿ ಇವರು ಐಪಿಎಲ್ನಲ್ಲಿ ತಮ್ಮ ಟೀಂ ಆದ ಎಸ್ಆರ್ಹೆಚ್ ಅನ್ನು ಹುರಿದುಂಬಿಸುವ ಮೂಲಕ ಪ್ರಥಮ ಬಾರಿಗೆ ಟಿವಿಯಲ್ಲಿ ಕಾಣಿಸಿಕೊಂಡಿದ್ದರು.
ಕವಿಯಾ ಅವರು ಎಂಬಿಎ ಪೂರ್ಣಗೊಳಿಸಿದ್ದು, ತಂದೆ ಕಲಾನಿತಿ ಮಾರನ್ ಅವರ ವ್ಯವಹಾರದೊಂದಿಗೆ ಕೈಜೋಡಿಸಿದ್ದಾರೆ. ಬಿಸಿನೆಸ್ನಲ್ಲಿ ಯಾವುದೇ ಅನುಭವವಿಲ್ಲದ ಕಾರಣ ಕವಿಯಾ ಅವರು ತಮ್ಮದೇ ಕಂಪನಿಯಾದ ಸನ್ ಟಿವಿ ನೆಟ್ವರ್ಕ್ನಲ್ಲಿ ಇಂಟರ್ನ್ಶಿಪ್ ಮಾಡಿದ್ದರು.
ಕವಿಯಾ ಅವರು ಪ್ರಸ್ತುತ ಸನ್ ಟಿವಿ ನೆಟ್ವರ್ಕ್ನ ಒಟಿಟಿ ಪ್ಲಾಟ್ಫಾರ್ಮ್ ಸನ್ ಎನ್ಎಕ್ಸ್ಟಿಯ ಮುಖ್ಯಸ್ಥರಾಗಿದ್ದಾರೆ.