ಚೆನ್ನೈ, ಏ.17 (DaijiworldNews/MB) : ಈ ವರ್ಷ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ)ಬೆಂಗಳೂರು ಸೇರಿದಂತೆ ಭಾರತದ ಒಂಬತ್ತು ಸ್ಥಳಗಳನ್ನು ಶನಿವಾರ ಆಯ್ಕೆ ಮಾಡಿದೆ.
ಈ ಬಾರಿ ಅಹ್ಮದಾಬಾದ್, ಚೆನ್ನೈ ಹಾಗೂ ಲಕ್ನೋ ಮೂರು ಹೊಸ ಸ್ಥಳಗಳನ್ನು ವಿಶ್ವಕಪ್ಗೆ ಆಯ್ಕೆ ಮಾಡಲಾಗಿದ್ದು, ಉಳಿದಂತೆ ಮುಂಬೈ, ದೆಹಲಿ, ಕೋಲ್ಕತಾ, ಬೆಂಗಳೂರು, ಹೈದರಾಬಾದ್ನ್ನು ಆಯ್ಕೆ ಮಾಡಲಾಗಿದೆ. ಈ ಆರು ಸ್ಥಳಗಳು 2016ರ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆದಿದ್ದವು.
ಇನ್ನು 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹಲವು ವರದಿಗಳು ತಿಳಿಸಿವೆ.
ಏತನ್ಮಧ್ಯೆ ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದೆ. ಎರಡನೇ ಕೊರೊನಾ ಅಲೆ ಆರಂಭವಾಗಿದೆ. ಆದರೆ ಈಗಾಗಲೇ ಒಂಬತ್ತು ಸ್ಥಳಗಳಿಗೆ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಲು ಬಿಸಿಸಿಐ ಮಾಹಿತಿ ನೀಡಿದ್ದು, ಈ ವಿಶ್ವಕಪ್ ಚುಟುಕಾಗಿರಬೇಕು, ಹಾಗೆಯೇ ಈಗಲೇ ಅದರ ತಯಾರಿ ಆರಂಭಿಸಿದೆ ಎಂದು ಹೇಳಲಾಗಿದೆ.