ಮುಂಬೈ, ಏ. 16 (DaijiworldNews/SM): ಇಲ್ಲಿನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಫಕ್ ಕಿಂಗ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 106 ರನ್ ಗಳಿಸಿದ್ದು, ಚೆನ್ನೈ ತಂಡಕ್ಕೆ 107 ರನ್ ಗಳ ಗುರಿ ನೀಡಿದೆ.
![](https://daijiworld.ap-south-1.linodeobjects.com/iWeb/tvdaijiworld/img_tv247/santhu-11.04.2021-punjab.jpg)
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಪಂಜಾಬ್ ತಂಡ 20 ಓವರ್ ಗಳಲ್ಲಿ ಎಂಟು ವಿಕೆಟ್ ಗಳ ನಷ್ಟಕ್ಕೆ 106 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಪಂಜಾಬ್ ಪರ ಶರುಕ್ 47 ರನ್ ಗಳಿಸಿದರು. ಉಳಿದಂತೆ ಯಾವುದೇ ಆಟಗಾರರಿಂಗ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ.