ಪುಣೆ, ಮಾ. 26 (DaijiworldNews/SM): ಇಲ್ಲಿನ ಮರಾರಾಷ್ಟ್ರ ಕ್ರಿಕೆಟ್ ಅಸೋಶಿಯೇಷನ್ ನಲ್ಲಿ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಇಂಗ್ಲೆಂಡ್ ತಂಡ ಆರು ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿ, ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 337 ರನ್ ಗಳ ಗುರಿ ನೀಡಿತ್ತು.
ಭಾರತ ನೀಡಿದ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಜಾನಿ ಬೈರ್ಸ್ಟ್ರೋ ನೆರವಾಗಿದ್ದು, 124 ರನ್ ಗಳ ಭರ್ಜರಿ ಶತಕ ಹಾಗೂ ಬೆನ್ ಸ್ಟೋಕ್ಸ್(99) ರನ್ ಗಳ ನೆರವಿನಿಂದ 43.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 337 ರನ್ ಗಳು ಗಳಿಸಿ ಗೆಲುವಿನ ನಗೆ ಚೆಲ್ಲಿತು.
ಇನ್ನು ಭಾರತದ ಪರ ಕೆ.ಎಲ್. ರಾಹುಲ್ ಶತಕ ಸಿಡಿಸಿ(108) ಮಿಂಚಿದರು.