ಅಹಮದಾಬಾದ್, ಮಾ.13 (DaijiworldNews/PY): ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಹಾಗೂ ಭಾರತದ ನಡುವೆ ನಡೆದ ಮೊದಲ ಟಿ-20 ಅಂತರಾಷ್ಟ್ರೀಯ ಪಂದ್ಯದಲ್ಲಿ ಟೀ ಇಂಡಿಯಾದ ಸ್ಪಿನ್ ಬೌಲರ್ ಯಜುವೇಂದ್ರ ಚಹಲ್ ಅವರು ಅತೀ ಹೆಚ್ಚು ವಿಕೆಟ್ ಗಳಿಸಿದ ಭಾರತೀಯ ಬೌಲರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಯಜುವೇಂದ್ರ ಚಹಲ್ ಅವರು, ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಗಳಿಸಿದ ಭಾರತೀಯ ಬೌಲರ್ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಪ್ರಸ್ತುತ ಪಟ್ಟಿಯಲ್ಲಿ ಜಸ್ಪ್ರೀತ್ ಬೂಮ್ರಾ ಅವರ ದಾಖಲೆಯನ್ನು ಯಜುವೇಂದ್ರ ಚಹಲ್ ಮುರಿದಿದ್ದಾರೆ.
ಚಹಲ್ ಅವರು ಇಲ್ಲಿಯವರೆಗೆ 46 ಪಂದ್ಯಗಳನ್ನು ಆಡಿದ್ದು, ಒಟ್ಟು 60 ವಿಕೆಟ್ ಪಡೆದಿದ್ದಾರೆ. ಈ ಮುಖೇನ ಚುಟುಕು ಪ್ರಕಾರದಲ್ಲಿ ಭಾರತದ ಅತೀ ಯಶಸ್ವಿ ಬೌಲರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಂತರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನ್ನುವ ದಾಖಲೆ ಶ್ರೀಲಂಕಾದ ಹಿರಿಯ ವೇಗಿ ಲಸಿತ್ ಮಾಲಿಂಗ ಅವರ ಹೆಸರಿನಲ್ಲಿದೆ. ಮಾಲಿಂಗ ಅವರು 84 ಪಂದ್ಯಗಳ ಪೈಕಿ ಒಟ್ಟು 107 ವಿಕೆಟ್ ಕಬಳಿಸಿದ್ದಾರೆ.