ಸಿಡ್ನಿ, ಜ 08 (DaijiworldNews/SM): ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ 2ನೇ ದಿನದಾಟ ಅಂತ್ಯವಾಗಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಲಷ್ಟೇ ಶಕ್ತವಾಗಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಚ್ರೇಲಿಯಾ ಗಳಿಸಿದ 338 ರನ್ ಗಳ ಗುರಿ ಬೆನ್ನಟ್ಟಿರುವ ಭಾರತ ತಂಡಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಆರಂಭ ಸಿಕ್ಕಿದೆ. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಜೋಡಿ ಮೊದಲ ವಿಕೆಟ್ ಗೆ 70 ರನ್ ಗಳನ್ನು ಪೇರಿಸಿದರು. ಈ ಹಂತದಲ್ಲಿ 26 ರನ್ ರಳಿಸಿದ್ದ ರೋಹಿತ್ ಶರ್ಮಾ ನಿರ್ಗಮಿಸಿದರು.
ಬಳಿಕ ಪೂಜಾರ ಜೊತೆ ಗೂಡಿದ ಶುಭ್ ಮನ್ ಗಿಲ್ ಅರ್ಧಶತಕ ಗಳಿಸಿ ತಂಡವನ್ನು ಆಘಾತದಿಂದ ಪಾರಿಮಾಡಿದರು. ಆದರೆ ಅರ್ಧಶತಕ ದಾಟುತ್ತಲೇ ಗಿಲ್ ಕಮಿನ್ಸ್ ಬೌಲಿಂಗ್ ನಲ್ಲಿ ಸ್ಲಿಪ್ ನಲ್ಲಿದ್ದ ಗ್ರೀನ್ ಗೆ ಕ್ಯಾಚ್ ನೀಡಿ ಔಟಾದರು. ದಿನದ ಅಂತ್ಯದಲ್ಲಿ ಪೂಜಾರ ಜೊತೆಗೂಡಿದ ರಹಾನೆ ಭಾರತ ತಂಡಕ್ಕೆ ನೆರವಾದರು. ರಕ್ಷಣಾತ್ಮಕ ಆಟವಾಡಿದ ಈ ಜೋಡಿ 11 ರನ್ ಗಳಿಸಿತು.
ಸದ್ಯ ೨ನೇ ದಿನದಾಟದಂತ್ಯಕ್ಕೆ ಭಾರತ ತಂಡ 2 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದ್ದು, 242 ರನ್ ಗಳ ಹಿನ್ನಡೆಯಲ್ಲಿದೆ.