ದುಬೈ, ಡಿ.28 (DaijiworldNews/HR): ಐಸಿಸಿ ದಶಕದ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು, ಇಂದಿನ ಪಟ್ಟಿಯಲ್ಲಿ ಕೂಡ ಭಾರತೀಯರೇ ಮೇಲುಗೈ ಸಾಧಿಸಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಶಕದ ಕ್ರಿಕೆಟರ್, ದಶಕದ ಏಕದಿನ ಆಟಗಾರ ಗರಿಮೆಗೆ ಪಾತ್ರರಾಗಿದ್ದಾರೆ.
2011ರ ಇಂಗ್ಲೆಂಡ್ ಸರಣಿಯಲ್ಲಿ ಇಯಾನ್ ಬೆಲ್ ವಿವಾದಾತ್ಮಕ ರನ್ ಔಟ್ ತೀರ್ಪಿಗೆ ಬಲಿಯಾದಾಗ ಅಂಪೈರ್ ತೀರ್ಪಿಗೆ ವಿರುದ್ಧವಾಗಿ ಮತ್ತೆ ಬ್ಯಾಟಿಂಗ್ಗ್ ಕರೆಸಿದ್ದರು. ಈ ವರ್ತನೆಗೆ ಐಸಿಸಿ ಮಹೇಂದ್ರ ಸಿಂಗ್ ಧೋನಿಯವರಿಗೆ ದಶಕದ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ ನೀಡಿದೆ.
ಇನ್ನು ದಶಕದ ಮಹಿಳಾ ಆಟಗಾರ್ತಿ, ದಶಕದ ಏಕದಿನ ಆಟಗಾರ್ತಿ, ದಶಕದ ಟಿ 20 ಆಟಗಾರ್ತಿ ಎಲ್ಲಾ ಪ್ರಶ್ತಿಗಳನ್ನು ಆಸ್ಟ್ರೇಲಿಯಾದ ಎಲಿಸ್ ಪೆರ್ರಿ ಬಾಚಿಕೊಂಡಿದ್ದಾರೆ.