ಮೆಲ್ಬೋರ್ನ್, ಡಿ.28 (DaijiworldNews/PY): ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸ್ಮರಣೀಯ ಗೆಲುವಿನ ಸನಿಹದಲ್ಲಿದೆ.
ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 131 ರನ್ಗಳ ಮುನ್ನಡೆಯೊಂದಿಗೆ ಮೂರನೇ ದಿನದಾಟದಲ್ಲಿಯೂ ಕೂಡಾ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ್ದು, ಆಸೀಸ್ ತಂಡ ಆರು ವಿಕೆಟ್ಗಳನ್ನು ಕಬಳಿಸುವಲ್ಲಿ ಸಫಲವಾಗಿದೆ.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ತಂಡಕ್ಕೆ ಭಾರತೀಯ ಬೌಲರ್ಗಳು ನಿರಂತರವಾಗಿ ಒತ್ತಡ ಹೇರುತ್ತಲೇ ಸಾಗಿದ್ದು. ಉಮೇಶ್ ಯಾದವ್ ಜೋ ಜೋ ಬರ್ನ್ಸ್ (4) ಅವರನ್ನು ಹೊರದಬ್ಬಿದ್ದು, ಆಸೀಸ್ಗೆ ಮೊದಲ ಆಘಾತ ನೀಡಿದರು. ಆದರೆ, ಉಮೇಶ್ ಯಾದವ್ ಗಾಯದ ಸಮಸ್ಯೆಗೊಳಗಾಗಿದ್ದು, ಮೈದಾನದಿಂದ ಹೊರನಡೆದರು.
ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಾರ್ನಸ್ ಲಾಬುಷೇನ್ (28) ಅವರನ್ನು ಹೊರದಬ್ಬಿದರು. ಜಸ್ಪೀತ್ ಬೂಮ್ರಾ ಸ್ಟೀವನ್ ಸ್ಮಿತ್ (8) ಕ್ಲೀನ್ ಬೌಲ್ಡ್ ಮಾಡಿದರು.
ಈ ಹಂತದಲ್ಲಿ ಅಪಾಯಕಾರಿ ಮಾರ್ನಸ್ ಲಾಬುಷೇನ್ (28) ಹೊರದಬ್ಬಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಮಗದೊಮ್ಮೆ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ ಸ್ಪೆಲ್ ಸಂಘಟಿಸಿದರು. ಟ್ರಾವಿಸ್ ಹೆಡ್ (17) ಮೊಹಮ್ಮದ್ ಸಿರಾಜ್ಗೆ ವಿಕೆಟ್ ಒಪ್ಪಿಸಿದರು. ಇನ್ನು ಮ್ಯಾಥ್ಯೂ ವೇಡ್ಗೆ (40) ರವೀಂದ್ರ ಜಡೇಜ ಅವರ ದಾಳಿಗೆ ಪೆವಿಲಿಯನ್ನತ್ತ ಸಾಗಿದರು.
ಇದಾದ ಬಳಿಕ ಆಸೀಸ್ ನಾಯಕ ಟಿಮ್ ಪೇನ್ (1) ವಿಕೆಟ್ ಪಡೆಯುವ ಮುಖೇನ ಮತ್ತೊಮ್ಮೆ ಆಘಾತ ನೀಡಿದರು. ಈ ಹಂತದಲ್ಲಿ ಆಸೀಸ್ ತಂಡ 99 ರನ್ಗೆ ಆರು ವಿಕೆಟ್ ಕಳೆದುಕೊಂಡು ಭಾರೀ ಹಿನ್ನೆಡೆಗೊಳಗಾಯಿತು. ದಿನದ ಅಂತ್ಯಕ್ಕೆ ಆಸೀಸ್ ಆರು ವಿಕೆಟ್ ಕಳೆದು ಕೊಂಡು 133 ರನ್ ಕಲೆ ಹಾಕಿದೆ.