ಮೆಲ್ಬೋರ್ನ್, ಡಿ.28 (DaijiworldNews/PY): ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ದ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ 131 ರನ್ಗಳ ಮುನ್ನಡೆ ಸಾಧಿಸಿದ್ದು, ಆಸಿಸ್ನ 195 ರನ್ಗಳಿಗೆ ಉತ್ತರವಾಗಿ ಭಾರತ 326 ರನ್ ಗಳಿಸಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿದೆ.
ನಾಯಕ ಅಂಜಿಕ್ಯಾ ರಹಾನೆ ಶತಕ (112) ಹಾಗೂ ರವೀಂದ್ರ ಜಡೇಜಾ ಅರ್ಧಶತಕ (57) ಬೆಂಬಲದೊಂದಿಗೆ ಭಾರತ ತಂಡ ಮುನ್ನಡೆ ಸಾಧಿಸಿದೆ.
ಮೂರನೇ ದಿನದ ಭೋಜನ ವಿರಾಮಕ್ಕೂ ಮೊದಲು ಭಾರತ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿದೆ.
ರಹಾನೆ 223 ಎಸೆತಗಳನ್ನು ಎದುರಿಸಿದ್ದು, 12 ಬೌಂಡರಿಗಳ ನೆರವಿನಿಂದ 112 ರನ್ ಗಳಿಸಿದರು. ಇದರಿಂದ ಅವರು ಆಸೀಸ್ ನೆಲದಲ್ಲಿ ಸ್ಮರಣೀಯ ಶತಕ ಬಾರಿಸಿದರು. ಇನ್ನೊಂದೆಡೆ ಜಡೇಜಾ ಅರ್ಧಶಕತ ಸಾಧನೆ ಮಾಡಿದರು. ಆದರೆ, ಅರ್ಧಶತಕದ ಬೆನ್ನಲ್ಲೇ ಜಡೇಜಾ ಕೂಡಾ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ಮರಳಿದರು. ಜಡೇಜಾ 159 ಎಸೆತಗಳಲ್ಲಿ ಮೂರು ಬೌಂಡರಿಗಳಿಂದ 57 ರನ್ ಗಳಿಸಿದರು.
ಭಾರತದ ತಂಡದಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳು ಹೆಚ್ಚಿನ ರನ್ ಗಳಿಸಲಿಲ್ಲ. ಅಂತಿಮವಾಗಿ ಭಾರತ ತಂಡ 326 ರನ್ ಗಳಿಸಿ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿದೆ.