ಮುಂಬಯಿ,ಡಿ. 27 (DaijiworldNews/HR): ಐಸಿಸಿ ದಶಕದ ಏಕದಿನ ಹಾಗೂ ಟಿ-ಟ್ವಿಂಟಿ ವಿಭಾಗದ ತಂಡದ ಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟ ಮಾಡಿದ್ದು, ಅದರಲ್ಲಿ ಭಾರತೀಯ ಆಟಗಾರರು ಮೇಲುಗೈ ಸಾಧಿಸಿದ್ದಾರೆ.
ಏಕದಿನ,ಟಿ-ಟ್ವಿಂಟಿ ಹಾಗೂ ಟೆಸ್ಟ್ ವಿಭಾಗದಲ್ಲಿ ಪ್ರಭಾವ ಬೀರಿದ ಹಾಗೂ ಪ್ರೇಕ್ಷಕರು ಮೆಚ್ಚಿದ ವಿವಿಧ ದೇಶದ ಆಟಗಾರರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದೆ. ಏಕದಿನ ಹಾಗೂ ಟಿ-ಟ್ವಿಂಟಿಯಲ್ಲಿ ಭಾರತೀಯ ಆಟಗಾರರು ಮುಂಚೂಣಿಯಲ್ಲಿದ್ದಾರೆ.
ಇನ್ನು ಏಕದಿನದ ದಶಕದ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಮಹೀಂದ್ರ ಸಿಂಗ್ ಧೋನಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದರ ಜತೆಗೆ ಟಿ-ಟ್ವಿಂಟಿ ವಿಭಾಗದಲ್ಲಿಯೂ ಧೋನಿ,ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷ ಅಂದರೆ ಟಿ-ಟ್ವಿಂಟಿ ಹಾಗೂ ಏಕದಿನ ದಶಕದ ತಂಡಕ್ಕೆ ಮಹೀಂದ್ರ ಧೋನಿಯ ನಾಯಕರಾಗಿದ್ದಾರೆ.
ಐಸಿಸಿಯ ದಶಕ ಪ್ರಶಸ್ತಿಗಳ ಘೋಷಣೆ ನಾಳೆ ಆಗಲಿದ್ದು, ಪ್ರಶಸ್ತಿ ರೇಸ್ ನಲ್ಲಿ ವಿರಾಟ್ ಕೊಹ್ಲಿ ಮೂರು ವಿಭಾಗದಲ್ಲೂ ಇದ್ದಾರೆ ಎನ್ನಲಾಗಿದೆ.