ನವದೆಹಲಿ, ಡಿ. 27 (DaijiworldNews/MB) : ಬ್ರಾಡೀ ಲೀ ಹೆಸರಿನಲ್ಲಿ ಆಲ್ ಎಲೈಟ್ ವ್ರೆಸ್ಲಿಂಗ್ನಲ್ಲಿ (ಎಇಡಬ್ಲ್ಯೂ) ಸ್ಪರ್ಧಿಸುತ್ತಿದ್ದ ಕುಸ್ತಿಪಟು ಜಾನ್ ಹ್ಯೂಬರ್ ನಿಧನರಾಗಿದ್ದಾರೆ.
41 ವರ್ಷ ಪ್ರಾಯದ ಹ್ಯೂಬರ್ ನಿಧನ ಹೊಂದಿರುವ ಬಗ್ಗೆ ಅವರ ಪತ್ನಿ ಅಮಾಂಡಾ ಇನ್ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ.
ನನ್ನ ಪತಿ ಶ್ವಾಸಕೋಶ ಸಂಬಂಧಿತ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದಾರೆ. ಕೊರೊನಾಕ್ಕೂ ಅವರ ಸಾವಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ಕೂಡಾ ನೀಡಿದ್ದಾರೆ.
ಹ್ಯೂಬರ್ ಈ ಹಿಂದೆ ಲ್ಯೂಕ್ ಹಾರ್ಪರ್ ಹೆಸರಿನಲ್ಲಿ ಡಬ್ಲ್ಯೂಡಬ್ಲ್ಯೂಇನಲ್ಲಿ ಸ್ಪರ್ಧಿಸುತ್ತಿದ್ದರು. 8 ವರ್ಷಗಳ ಕಾಲ ಯಶಸ್ವ ಪ್ರದರ್ಶನ ನೀಡಿದ್ದ ಅವರು, ಮಾರ್ಚ್ನಲ್ಲಿ ಎಇಡಬ್ಲ್ಯೂಗೆ ಸೇರಿದರು.
ಹ್ಯೂಬರ್ ನಿಧನಕ್ಕೆ ಡಬ್ಲ್ಯೂಡಬ್ಲ್ಯೂಇ ಹಾಗೂ ಎಇಡಬ್ಲ್ಯೂ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಹ್ಯೂಬರ್ ಪತ್ನಿ ಹಾಗೂ ಇಬ್ಬರು ಮಕ್ಕಳಾದ ಬ್ರೋಡಿ ಹಾಗೂ ನೊಲನ್ರನ್ನು ಅಗಲಿದ್ದಾರೆ.