ಮೆಲ್ಬೋರ್ನ್, ಡಿ.26 (DaijiworldNews/PY): ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಾಟದ ಮೊದಲ ದಿನದಾಟದಲ್ಲಿ ಭಾರತದ ತಂಡ ಪ್ರಾಬಲ್ಯ ಮೆರೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ 72.3 ಓವರ್ಗಳಲ್ಲಿ 195 ರನ್ಗಳಿಗೆ ಆಲ್ ಔಟ್ ಆಯಿತು.
ಆಸ್ಟ್ರೇಲಿಯಾ ಪರ ಮ್ಯಾಥ್ಯೂ ವೇಡ್ 30, ಮಾರ್ನಸ್ ಲಬುಶೇನ್ 48, ಟ್ರಾವಿಸ್ ಹೆಡ್ 38, ನಥನ್ ಲಿಯಾನ್ 20 ರನ್ ಹೊಡೆದರು.
ಮೊದಲ ಇನ್ನಿಂಗ್ಸ್ ಪ್ರಾರಂಭಿಸಿದ ಭಾರತ ಆರಂಭದಲ್ಲೇ ಕುಸಿತ ಕಮಡಿದ್ದು, 11 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 36 ರನ್ ಕಲೆ ಹಾಕಿದೆ. ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಮೊದಲ ಓವರ್ನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಶುಭ್ಮನ್ ಗಿಲ್ 28, ಚೇತೇಶ್ವರ ಪೂಜಾರ 7 ರನ್ ಗಳಿಸಿದ್ದು, ನಾಲೇ ಬ್ಯಾಟಿಂಗ್ ಮುಂದುವರೆಯಲಿದೆ.