ನವದೆಹಲಿ, ಡಿ.24 (DaijiworldNews/PY): "ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯಾದ ನಿಯಮವಿದೆ. ಈ ನಿಯಮಗಳ ಬಗ್ಗೆ ಹೊಸಬರು ಅಚ್ಚರಿಪಡುತ್ತಾರೆ" ಎಂದು ಬ್ಯಾಟಿಂಗ್ ದಂತಕತೆ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
ಮೊದ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ ಅವರಿಗೆ ರಜೆ ನೀಡಿ, ಈಗಾಗಲೇ ಮಗುವಿನ ತಂದೆಯಾಗಿರುವ ನಟರಾಜನ್ ಅವರಿಗೆ ರಜೆ ನೀಡದೆ ತಂಡದ ಆಡಳಿತದ ವಿಭಿನ್ನ ನಿಯಮವನ್ನು ಗವಾಸ್ಕರ್ ಅವರು ಪ್ರತಿಕ್ರಿಯೆ ನೀಡಿದ್ದು, "ನಟರಾಜನ್ ಅವರಿಗೆ ಈ ರೀತಿಯಾದ ನಿಯಮಗಳಿಂದ ಆಶ್ಚರ್ಯವಾಗಬಹುದು. ನಟರಾಜನ್ ಅವರು ಹೊಸ ಆಟಗಾರನಾಗಿರುವ ಕಾರಣ ಏನೂ ಹೇಳುವಹಾಗಿಲ್ಲ" ಎಂದಿದ್ದಾರೆ.
"ನಟರಾಜನ್ ಅವರು ಎಡಗೈ ಬೌಲರ್ ಆಗಿದ್ದು, ಮೊದಲ ಟಿ-20 ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಪ್ಲೇ ಆಫ್ ಪಂದ್ಯ ಆಗುತ್ತಿರುವ ಸಂದರ್ಭದಲ್ಲೇ ನಟರಾಜನ್ ಅವರು ಹೆಣ್ಣು ಮಗುವಿನ ತಂದೆಯಾಗಿದ್ದರು. ನಟರಾಜನ್ ಅವರು ಮೊದಲ ವಾರದಲ್ಲೇ ಟೆಸ್ಟ್ ಸರಣಿ ಮುಗಿದ ನಂತರವಷ್ಟೇ ಸ್ವದೇಶಕ್ಕೆ ಮರಳಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಅವರು ಮೊದ ಟೆಸ್ಟ್ ಪಂದ್ಯಾಟ ಮುಗಿದ ಕೂಡಲೇ ಭಾರತಕ್ಕೆ ವಾಪಾಸ್ಸಾಗಲು ಒಪ್ಪಿಗೆ ನೀಡಲಾಗಿದೆ" ಎಂದು ಸುನೀಲ್ ಗವಾಸ್ಕರ್ ಅವರು ಕಾಲಂನಲ್ಲಿ ಬರೆದುಕೊಂಡಿದ್ದಾರೆ.
"ತಂಡದ ಮೀಟಿಂಗ್ನ ವೇಳೆ ಅಶ್ವಿನ್ ಅವರು ಮನ ಬಿಚ್ಚಿ ಮಾತನಾಡುತ್ತಾರೆ. ಒಂದು ಪಂದ್ಯದಲ್ಲಿಯೂ ಕೂಡಾ ಅವರು ವಿಕೆಟ್ ತೆಗೆಯದೇ ಇದ್ದಲ್ಲಿ ಅವರಿಗೆ ಮುಂದಿನ ಪಂದ್ಯದಲ್ಲಿ ಸ್ಥಾನ ನೀಡಲು ಆಗುವುದಿಲ್ಲ. ಆದರೆ, ಹಿರಿಯ ಬ್ಯಾಟ್ಸ್ಮನ್ಗೆ ಈ ರೀತಿಯಾಗಿ ಮಾಡಲು ಆಗುವುದಿಲ್ಲ. ಒಬ್ಬೊಬ್ಬರಿಗೆ ಒಂದು ರೀತಿಯಾದ ನಿಯಮಗಳಿವೆ. ಈ ವಿಚಾರದಲ್ಲಿ ನಮ್ಮ ಮೇಲೆ ನಂಬಿಕೆ ಇಲ್ಲದಿದ್ದಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ಟಿ.ನಟರಾಜನ್ ಅವರಲ್ಲಿ ಕೇಳಿ" ಎಂದಿದ್ದಾರೆ.