ನವದೆಹಲಿ,ಡಿ.22 (DaijiworldNews/HR): ಕ್ರಿಕೆಟ್ ಟೆಸ್ಟ್ ಇತಿಹಾಸದಲ್ಲೇ ಭಾರತ ತಂಡ ತನ್ನ ಕನಿಷ್ಠ ಮೊತ್ತ ಪೇರಿಸಿ ಅಡಿಲೇಡ್ನಲ್ಲಿ ಹೀನಾಯ ಸೋಲು ಕಂಡಿದ್ದು ಮುಖ್ಯ ಕೋಚ್ ರವಿ ಶಾಸ್ತ್ರಿ ಅವರ ತಲೆದಂಡಕ್ಕೆ ಕ್ರಿಕೆಟ್ ಅಭಿಮಾನಿಗಳು ಆಗ್ರಹಿಸಿದ್ದಾರೆ.
ಭಾರತ ತಂಡದ ಆಡುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅಭಿಮಾನಿಗಳು ರವಿ ಶಾಸ್ತ್ರಿ ರಾಜೀನಾಮೆ ನೀಡಬೇಕು ಅಥವಾ ಬಿಸಿಸಿಐ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ತಂಡದ ಸೋಲಿಗೆ ಕೇವಲ ಆಟಗಾರರು ಮಾತ್ರವಲ್ಲದೇ ಕೋಚ್ ರವಿ ಶಾಸ್ತ್ರಿ ಕೂಡ ಹೊಣೆಗಾರರಾಗುತ್ತಾರೆ, ಹಾಗಾಗಿ ರವಿ ಶಾಸ್ತ್ರಿ ಅವರನ್ನು ಕೂಡಲೇ ತಂಡದಿಂದ ಹೊರಹಾಕಬೇಕು. ಈ ವಿಚಾರವಾಗಿ ವಿರಾಟ್ ಕೊಹ್ಲಿ ಶಾಸ್ತ್ರಿಗೆ ಬೆಂಬಲ ಕೊಡಬಾರದೆಂದು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿ ಶಾಸ್ತ್ರಿ ಅವರು 2019ರಲ್ಲಿ ಭಾರತ ತಂಡದ ಮುಖ್ಯ ಕೋಚ್ ಆಗಿ ಮರು ನೇಮಕಗೊಂಡಿದ್ದು, 2021ರ ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ವರೆಗೆ ಅಧಿಕಾರಾವಧಿ ಹೊಂದಿದ್ದಾರೆ.