ನವದೆಹಲಿ, ಡಿ.09 (DaijiworldNews/MB) : ಭಾರತೀಯ ಕ್ರಿಕಟಿಗ ಹಾಗೂ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪಾರ್ಥಿವ್ ಪಟೇಲ್, ಎಲ್ಲ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.
ತಮ್ಮ ನಿವೃತ್ತಿ ಘೋಷಿಸಿ ಟ್ವೀಟ್ ಮಾಡಿರುವ ಅವರು, ತಮ್ಮ 18 ವರ್ಷಗಳ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳುವುದಾಗಿ ತಿಳಿಸಿದ್ದಾರೆ.
"ಇಂದು, ನಾನು ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುತ್ತೇನೆ. ಈ 18 ವರ್ಷದ ಕ್ರಿಕೆಟ್ ಜೀವನಕ್ಕೆ ಅನೇಕರಿಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಪರದೆ ಎಳೆಯುತ್ತಿದ್ದೇನೆ'' ಎಂದು 35 ವರ್ಷದ ಪಾರ್ಥಿವ್ ತಮ್ಮ ಅಧಿಕೃತ ಟ್ವಿಟರ್ನಲ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೌರವ್ ಗಂಗೂಲಿ ನೇತೃತ್ವದಲ್ಲಿ 17 ವರ್ಷದಲ್ಲಿ ಕ್ರಿಕೆಟ್ ತಂಡಕ್ಕೆ ಪ್ರವೇಶಿಸಿದ ಅವರು, 153 ದಿನಗಳಲ್ಲಿ ಟೆಸ್ಟ್ ಮೂಲಕ ಚೊಚ್ಚಲ ಪ್ರವೇಶ ಪಡೆದಿದ್ದರು. ಅವರು ದೇಶಕ್ಕಾಗಿ 65 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 25 ಟೆಸ್ಟ್, 38 ಏಕದಿನ ಮತ್ತು ಎರಡು ಟಿ 20 ಅಂತರರಾಷ್ಟ್ರೀಯ ಪಂದ್ಯಗಳು ಸೇರಿವೆ.
ಎಡಗೈ ಬ್ಯಾಟ್ಸ್ಮನ್ ಆಗಿರುವ ಅವರು, 25 ಟೆಸ್ಟ್ ಪಂದ್ಯದಲ್ಲಿ 934 ರನ್, 38 ಏಕದಿನ ಪಂದ್ಯದಲ್ಲಿ 736, ಎರಡು ಟಿ 20 ಪಂದ್ಯದಲ್ಲಿ 36, 139 ಐಪಿಎಲ್ ಪಂದ್ಯದಲ್ಲಿ 2848 ರನ್ಗಳನ್ನು ಗಳಿಸಿದ್ದಾರೆ.
ಇನ್ನು 25 ಟೆಸ್ಟ್ ಪಂದ್ಯದಲ್ಲಿ 62 ಕ್ಯಾಚ್, 10 ಸ್ಟಂಪಿಂಗ್, 38 ಏಕದಿನ ಪಂದ್ಯದಲ್ಲಿ 30 ಕ್ಯಾಚ್, 9 ಸ್ಟಂಪಿಂಗ್, ಎರಡು ಟಿ 20 ಪಂದ್ಯದಲ್ಲಿ 1 ಕ್ಯಾಚ್ ಪಡೆದಿದ್ದಾರೆ.