ಸಿಡ್ನಿ, ಡಿ.06 (DaijiworldNews/MB) : ಮೊದಲ ಟಿ20 ಪಂದ್ಯದಲ್ಲಿ ರೋಚಕ ಜಯ ಗಳಿಸಿದ್ದ ಟೀಂ ಇಂಡಿಯಾಗೆ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 195 ರನ್ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಪಡೆದಿದೆ. ಆಸ್ಟ್ರೇಲಿಯಾ ಪರ ವಾಡೆ 58, ಸ್ಟೀವನ್ ಸ್ಮಿತ್ 46, ಮ್ಯಾಕ್ಸ್ ವೆಲ್ 22, ಹೆನ್ರಿಕ್ಸ್ 26 ಹಾಗೂ ಸ್ಟೋಯ್ನಿಸ್ ಅಜೇಯ 16 ರನ್ ಗಳಿಸಿದ್ದಾರೆ.
ಟೀಂ ಇಂಡಿಯಾ ಪರ ನಟರಾಜನ್ ನಾಲ್ಕು ಓವರ್ಗಳಲ್ಲಿ 20 ರನ್ಗೆ 2 ವಿಕೆಟ್ ಪಡೆದಿದ್ದಾರೆ. ಯಜುವೇಂದ್ರ ಚಹಾಲ್ ಬಾಲಿಂಗ್ಗೆ 51 ಮತ್ತು ದೀಪಕ್ ಚಹಾರ್ಗೆ ಬಾಲಿಂಗ್ಗೆ 48 ರನ್ನ್ನು ಆಸ್ಟ್ರೇಲಿಯಾ ಪೇರಿಸಿದೆ.