ಸಿಡ್ನಿ, ನ.21 (DaijiworldNews/PY): "ಕೆ.ಎಲ್.ರಾಹುಲ್ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಅತ್ಯಂತ ಅಪಾಯಕಾರಿ ಆಗಬಲ್ಲರು" ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಹೇಳಿದ್ದಾರೆ.
"ಐಪಿಎಲ್ ಸಂದರ್ಭ ರಾಹುಲ್ ಗನ್ ಆಗಿದ್ದರು. ಇವರು ಒತ್ತಡದ ವೇಳೆ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಹಾಗಾಗಿ ಟೆಸ್ಟ್ನ ಸಂದರ್ಭ ವಿರಾಟ್ ಕೊಹ್ಲಿ ಗೈರಾಗಿದ್ದರೂ ಕೂಡಾ ರಾಹುಲ್ ಅವರು ನಮ್ಮ ಪಾಲಿಕೆ ಅತ್ಯಂತ ಅಪಾಯಕಾರಿಯಾಗು ಎದುರಾಗುವ ಸಾಧ್ಯತೆ ಇದೆ" ಎಂದಿದ್ದಾರೆ.
"ಭಾರತ-ಆಸ್ಟ್ರೇಲಿಯಾ ಸರಣಿಯ ತಂಡ ಮೀಟಿಂಗ್ ಸಂದರ್ಭ ರಾಹುಲ್ ಅವರನ್ನು ಹೇಗೆ ಔಟ್ ಮಾಡಬಹುದು ಎಂದು ಕೇಳಿದರೆ, ರಾಹುಲ್ ಅವರು ಅಪಾಯಕಾರಿ ಬ್ಯಾಟ್ಸ್ಮನ್ ಅವರನ್ನು ರನ್ ಔಟ್ ಮಾಡಲು ಪ್ರಯತ್ನಪಡಿ ಎಂದು ಉತ್ತರಿಸಬೇಕಾಗುತ್ತದೋ ಏನೋ ?"ಎಂದು ಹೇಳಿದ್ದಾರೆ.
"ರಾಹುಲ್ ಅವರು ಸೀಮಿತ ಓವರ್ಗಳ ತಂಡಕ್ಕೆ ನಾಯಕನಾಗಿ ನೇಮಕವಾಗಿದ್ದಾರೆ. ಇದು ಭಾರತ ತಂಡ ರಾಹುಲ್ ಅವರ ಮೇಲೆ ಇರಿಸಿದ ಭರವಸೆಗೆ ಸಾಕ್ಷಿಯಾಗಿದೆ" ಎಂದಿದ್ದಾರೆ.