ಮುಂಬೈ, ನ.14 (DaijiworldNews/PY): ಶಿಕ್ಷಣ ಶುಲ್ಕಕ್ಕೆ ಹಣಕಾಸು ನೀಡುವ ಫೈನಾನ್ಸ್ಪಿಯರ್ ಸಂಸ್ಥೆ ಭಾರತ ಕ್ರಿಕೆಟ್ ತಂಡದ ಆಟಗಾರ ರೋಹಿತ್ ಶರ್ಮಾ ಅವರನ್ನು ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿದೆ.
ಶಿಕ್ಷಣ ಕ್ಷೇತ್ರದ ಪರಿವರ್ತನೆಗೆ ಹಾಗೂ ಶಿಕ್ಷಣದ ವಿವಿಧ ವಿಭಾಗಗಳಲ್ಲಿ ಹೊಸತನವನ್ನು ಪರಿಚಯಿಸಲು ರೋಹಿತ್ ಶರ್ಮಾ ಅವರು ಫೈನಾನ್ಸ್ಪಿಯರ್ನೊಂದಿಗೆ ಕೈಜೋಡಿಸಿದ್ದಾರೆ.
ಫೈನಾನ್ಸ್ಪಿಯರ್ ಕೇವಲ ಹಣಕಾಸು ಸೇವೆ ಮಾತ್ರವಲ್ಲದೇ, ವಿಮಾ ರಕ್ಷಣೆ ಹಾಗೂ ಆನ್ಲೈನ್ ಕಲಿಕೆಗೂ ಸಹಾಯವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಹಿತ್ ಶರ್ಮಾ ಅವರು, "ಫೈನಾನ್ಸ್ಪಿಯರ್ನೊಂದಿಗೆ ಕೈಜೋಡಿಸುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಮುಖ್ಯವಾದ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಂಪೆನಿಯು ಉತ್ತಮವಾದ ಕಾರ್ಯ ಮಾಡುತ್ತಿದೆ. ಫೈನಾನ್ಸ್ಪೀರ್ ಹಲವಾರು ಪೋಷಕರಿಗೆ ಅವರ ಉದ್ಯಮದ ಮೂಲಕ ಸಹಾಯ ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ" ಎಂದಿದ್ದಾರೆ.