ಮುಂಬೈ, ನ. 13 (DaijiworldNews/SM): ಐಪಿಎಲ್ ಮುಗಿಸಿ ದುಬೈನಿಂದ ಮರಳುತ್ತಿದ ಮುಂಬೈ ಆಟಗಾರ ಕೃಣಾಲ್ ಪಾಂಡೆಯನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಡಿಆರ್ ಐ ಅಧಿಕಾರಿಗಳು ತಡೆದು ವಿಚಾರಣೆ ನಡೆಸಿದ ಘಟನೆ ನಡೆದಿದೆ.
ಐಪಿಎಲ್ ಮುಗಿಸಿ ಮರಳುತ್ತಿದ್ದ ಕೃಣಾಲ್ ಪಾಂಡೆ ಹೆಚ್ಚುವರಿ ಚಿನ ಹಾಗೂ ಬೆಳೆಬಾಳುವ ವಸ್ತುಗಳನ್ನು ಹೊಂದಿದ್ದಾರೆ ಎನ್ನುವ ಕಾರಣದಿಂದಾಗಿ ಅವರನ್ನು ತಡೆದು ವಿಚಾರಣೆ ನಡೆಸಲಾಗಿದೆ. ಅಲ್ಲದೆ, ಹೆಚ್ಚುವರಿಯಾಗಿ ಹೊಂದಿದ್ದ ಚಿನ್ನ ಹಾಗೂ ಇತರ ವಸ್ತುಗಳಿಗೆ ತೆರಿಗೆ ಪಾವತಿಸುವಂತೆ ವಿಮಾನ ನಿಲ್ದಾಣದ ಗುಪ್ತಚರ ಮಹಾನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸರಕಾರದ ನಿಯಮದ ಪ್ರಕಾರ ದುಬೈನಿಂದ ಭಾರತಕ್ಕೆ ಮರಳುವವರು ಕೇವಲ ಐವತ್ತು ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನಷ್ಟೇ ಸುಂಕ ಇಲ್ಲದೆ ತರಲು ಅವಕಾಶವಿದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ತರುವುದಾದಲ್ಲಿ ಸುಂಕ ಪಾವತಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೃಣಾಲ್ ಪಾಂಡೆ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.