ಅಬುಧಾಬಿ, ನ. 10 (DaijiworldNews/SM): ಇಲ್ಲಿನ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್-2020ರ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದು ಬೀಗಿದ್ದು, ಮತ್ತೊಮ್ಮೆ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡಿಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್ ಮನ್ ಗಳ ಆಟ ಮುಂಬೈ ಬೌಲರ್ ಗಳಾ ಮುಂದೆ ನಡೆಯಲಿಲ್ಲ. ಆರಂಭಿಕರಾದ ಸ್ಟೋನಿಸ್ ಖಾತೆ ತೆರೆಯಲಾಗದೆ ಮರಳಿದರು. ಶಿಖರ್ ಧವನ್ 15, ರಹಾನೆ ಎರಡು ರನ್ ಗಳಿಸಿ ಫೆವೀಲಿಯನ್ ನತ್ತ ನಡೆದರು. ಈ ವೆಳೆ ತಂಡಕ್ಕೆ ನೆರವಾದ ನಾಯಕ ಶ್ರೇಯಸ್ ಐಯ್ಯರ್ ಅಜೇಯ 65 ರನ್ ಸಿಡಿಸಿದರು. ರಿಷಬ್ ಪಂತ್ 56 ರನ್ ಗಳಿಸಿದರು. ಅಂತಿಮವಾಗಿ 7 ವಿಕೆಟ್ ಗಳ ನಷ್ಟಕ್ಕೆ ಡೆಲ್ಲಿ 156 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂಬೈ ಪರ ಬೋಲ್ಟ್ ಮೂರು ಹಾಗೂ ನಿಲೆ ಎರಡು ವಿಕೆಟ್ ಗಳನ್ನು ಪಡೆದರು.
ಇನ್ನು ಡೆಲ್ಲಿ ನೀಡಿದ ಗುರಿ ಬೆನ್ನಟ್ಟಿದ ಮುಂಬೈ ತಂಡ 18.4 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಗೆಲುವಿನ ನಗೆ ಬೀರುವ ಜೊತೆಗೆ ಮತ್ತೊಮ್ಮೆ ರೋಹಿತ್ ಬಳಗ ಚಾಂಪಿಯನ್ ಆಗಿ ಹೊರ ಹೊಮ್ಮಿತು.