ಅಬುಧಾಬಿ, ನ. 06 (DaijiworldNews/SM): ಇಲ್ಲಿನ ಶೇಖ್ ಝೈಯ್ಯದ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಹೈದ್ರಾಬಾದ್ ತಂಡ ಆರ್ ಸಿಬಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಎಂಟ್ರಿಪಡೆದುಕೊಂಡಿದ್ದು, ಆರ್ ಸಿಬಿ ತವರಿನತ್ತ ಮುಖಮಾಡಿದೆ.
ಟಾಸ್ ಗೆದ್ದ ಹೈದ್ರಾಬಾದ್ ತಂಡ ಆರ್ ಸಿಬಿಗೆ ಬ್ಯಾಟಿಂಗ್ ಗೆ ಆಹ್ವಾನ ನೀಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ವಿರಾಟ್ 6, ಪಡಿಕ್ಕಲ್ ಒಂದು ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಆರನ್ ಪಿಂಚ್ 32, ಎಬಿಡಿವಿಲಿಯರ್ಸ್ 56 ರನ್ ಸಿಡಿಸಿದ್ದು ಬಿಟ್ಟರೆ ಯಾರಿಂದಲು ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಅಂತಿಮವಾಗಿ ಏಳು ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಲಷ್ಟೇ ಶಕ್ತವಾಯಿತು.
ಇನ್ನು ಹೈದ್ರಾಬಾದ್ ಪರ ಡೇವಿಡ್ ವಾರ್ನರ್ 17, ಮನೀಶ್ ಪಾಂಡೆ 24 ರನ್ ಗಳಿಸಿದರೆ, ವಿಲಿಯಂಸನ್ 50 ಹಾಗೂ ಹೋಲ್ಡರ್ 20 ರನ್ ಸಿಡಿಸಿ ತಂಡದ ಗೆಲುವಿನ ರುವಾರಿಗಳೆನಿಸಿದರು.