ನವದೆಹಲಿ,ನ. 06 (DaijiworldNews/HR): ಮಣಿಪುರದ ಜ್ಞಾನೇಂದ್ರೊ ನಿಂಗೋಮ್ಬಾಮ್ ಹಾಕಿ ಇಂಡಿಯಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೊರೊನಾದ ಹಿನ್ನೆಲೆಯಲ್ಲಿ ಸದಸ್ಯ ಘಟಕಗಳಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆಗೆ ಪ್ರವೇಶ ಕಲ್ಪಿಸಲಾಗಿದ್ದು, ಈ ಸಮಯ ಅವಿರೋಧವಾಗಿ ಆಯ್ಕೆಯಾದ ಜ್ಞಾನೇಂದ್ರೊ ಈಶಾನ್ಯ ರಾಜ್ಯದಿಂದ ಈ ಹುದ್ದೆಗೆ ಆಯ್ಕೆಯಾದ ಮೊದಲಿಗರೆನಿಸಿಕೊಂಡಿದ್ದಾರೆ.
ಇನ್ನು ಜ್ಞಾನೇಂದ್ರೊ ನಿಂಗೋಮ್ಬಾಮ್ ಅವರು ಎರಡು ವರ್ಷಗಳ ಅವಧಿಗೆ 2009-2014ರ ನಡುವೆ ಮಣಿಪುರ ಹಾಕಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲ ಹಾಕಿ ಜತೆಗೆ ಸಂಬಂಧ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಅವಿರೋಧವಾಗಿ ಆಯ್ಕೆಯಾದ ಜ್ಞಾನೇಂದ್ರೊ ನಿಂಗೋಮ್ಬಾಮ್ ಅವರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜಿಂದರ್ ಸಿಂಗ್ ಅಭಿನಂದಿಸಿದ್ದಾರೆ.