ಅಬುಧಾಬಿ, ಅ. 28 (DaijiworldNews/SM): ಕಳೆದ ಐದು ಪಂದ್ಯಗಳನ್ನು ನಿರಂತರವಾಗಿ ಗೆದ್ದುಕೊಂಡಿದ್ದ ಪಂಜಾಬ್ ಶುಕ್ರವಾರದಂದು ರಾಜಸ್ಥಾನಕ್ಕೆ ಶರಣಾಗಿದೆ. ಕ್ರಿಸ್ ಗೇಲ್ ಅಬ್ಬರದ ಬಳಿಕವೂ ಪಂದ್ಯವನ್ನು ಗೆಲ್ಲಲು ಪಂಜಾಬ್ ಗೆ ಸಾಧ್ಯವಾಗಿಲ್ಲ. ರಾಜಸ್ಥಾನ ೭ ವಿಕೆಟ್ ಗಳಿಂದ ಪಂದ್ಯ ಗೆದ್ದುಕೊಂಡಿದೆ.
ಇಲ್ಲಿನ ಶೇಖ್ ಝೈಯ್ಯದ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಯಲ್ಪಟ್ಟ ಪಂಜಾಬ್ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ185 ರನ್ ಗಳಿಸಿತು. ನಾಯಕ ಕೆ.ಎಲ್. ರಾಹುಲ್ 46 ರನ್ ಸಿಡಿಸಿದರು. ಈ ವೇಳೆ ಅಬ್ಬರಿಸಿ ಕ್ರಿಸ್ ಗೇಲ್ 99 ರನ್ ಸಿಡಿಸಿ ಶತಕ ವಂಚಿತರಾಗಿ ನಿರ್ಗಮಿಸಿದರು. ಮತ್ತೊಂದೆಡೆ ಪೂರನ್ 22 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ರಾಜಸ್ಥಾನ 17.3 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿ ಗೆಲುವಿನ ನಗೆ ಚೆಲ್ಲಿತು. ಆರಂಭಿಕರಾದ ಬೆನ್ ಸ್ಟ್ರೋಕ್ಸ್ 50, ರಾಬಿನ್ ಉತ್ತಪ್ಪ 30, ಸಂಜು ಸ್ಯಾಮ್ಸನ್ 48, ಸ್ಟೀವನ್ ಸ್ಮಿತ್ 31, ಬಟ್ಲರ್ 22ರನ್ ಸಿಡಿಸಿದರು.