ಅಬುಧಾಬಿ, ಅ. 19 (DaijiworldNews/SM): ಇಲ್ಲಿನ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮುಂಬೈ ಹಾಗೂ ಪಂಜಾಬ್ ನಡುವಿನ ಪಂದ್ಯ ಎರಡು ಸೂಪರ್ ಓವರ್ ಗಳನ್ನು ಕಂಡಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಎರಡನೇ ಸೂಪರ್ ಓವರ್ ನಲ್ಲಿ ಗೆದ್ದು ಬೀಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ ಇಪ್ಪತ್ತು ಓವರ್ ಗಳಲ್ಲಿ ಆರು ವಿಕೆಟ್ ಗಳ ನಷ್ಟಕ್ಕೆ 176 ರನ್ ಗಳಿಸಿದೆ. ಮುಂಬೈ ಪರ ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ವೈಫಲ್ಯ ತೋರಿದ್ದಾರೆ. ಉಳಿದಂತೆ ಡಿ ಕಾಕ್ 53, ಕೃಣಲ್ ಪಾಂಡ್ಯ 34, ಪೊಲಾರ್ಡ್ 34 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಪಂಜಾಬ್ ಕೂಡ 176 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಿಂದಾಗಿ ಪಂದ್ಯ ಟೈಗೊಂಡಿತು. ಬಳಿಕ ಸೂಪರ್ ಓವರ್ ನಲ್ಲಿ ಪಂಜಾಬ್ ಐದೇ ರನ್ ಕಲೆ ಹಾಕಿತಾದರೂ, ಮುಂಬೈಗೆ ಈ ಗುರಿ ಕಬ್ಬಿಣದ ಕಡಲೆಯಾಯಿತು. ಮತ್ತೊಂದು ಸೂಪರ್ ಓವರ್ ನಲ್ಲಿ ಮಾಯಾಂಕ್ ಅವರ ಅದ್ಬುತ ಪ್ರದರ್ಶನ ತಂಡಕ್ಕೆ ಗೆಲುವು ತಂದುಕೊಟ್ಟಿತು.