ಅಬುಧಾಬಿ, ಅ. 16 (DaijiworldNews/MB) : ಶುಕ್ರವಾರ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತ ನೈಟ್ರೈಡರ್ಸ್ ನಡುವೆ ನಡೆದ ಪಂದ್ಯದಲ್ಲಿ ಕೋಲ್ಕತ್ತ ನೈಟ್ರೈಡರ್ಸ್ ನೀಡಿದ 149 ರನ್ಗಳ ಗುರಿ ಬೆನ್ನತ್ತಿದ್ದ ಮುಂಬೈ ಎಂಟು ವಿಕೆಟ್ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಕೋಲ್ಕತ್ತ ನೈಟ್ರೈಡರ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಕಲೆ ಹಾಕಿ ನೈಟ್ರೈಡರ್ಸ್ಗೆ 149 ರನ್ಗಳ ಗುರಿ ನೀಡಿದೆ. ಈ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ 16.4 ಓವರ್ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತ ತಂಡದಲ್ಲಿ ಪ್ಯಾಟ್ ಕಮಿನ್ಸ್ ಕೇವಲ 36 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಔಟಾಗದೆ 53 ರನ್ ಗಳಿಸಿದರು. ಇದು ಐಪಿಎಲ್ನಲ್ಲಿ ಅವರ ಮೊದಲ ಅರ್ಧಶತಕವಾಗಿದೆ. ಮೋರ್ಗನ್ 39 ರನ್ ಗಳಿಸಿ ಔಟಾಗದೆ ಉಳಿದಿದ್ದರು. ರೋಹಿತ್ ಶರ್ಮಾ ಪಡೆಯ ಬೌಲರ್ಗಳ ಶಿಸ್ತಿನ ಬೌಲಿಂಗ್ ದಾಳಿಗೆ ರಾಹುಲ್ ತ್ರಿಪಾಠಿ (7), ಶುಭಮನ್ ಗಿಲ್ (21), ನಿತೀಶ್ ರಾಣಾ (5), ದಿನೇಶ್ ಕಾರ್ತಿಕ್ (4) ಮತ್ತು ಆ್ಯಂಡ್ರೆ ರಸೆಲ್ (11) ರನ್ ಗಳಿಸಿ ಔಟಾಗಿದ್ದರು.
ಮುಂಬೈ ಪರ ರಾಹುಲ್ ಚಾಹರ್ 4 ಓವರ್ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಪಡೆದರೆ, ಟ್ರೆಂಟ್ ಬೌಲ್ಟ್, ನಾಥನ್ ಕಲ್ಟರ್ನೈಲ್ ಮತ್ತು ಜಸ್ಪ್ರೀತ್ ಬೂಮ್ರಾ ತಲಾ ಒಂದೊಂದು ವಿಕೆಟ್ ಪಡೆದರು.
ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ 35 ರನ್ಗಳಿಸಿ ಔಟಾದರೆ, ಸೂರ್ಯ ಕುಮಾರ್ ಯಾದವ್ 10 ರನ್ ಗಳಿಸಿ ಔಟಾಗಿದ್ದಾರೆ.
ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ 35 ರನ್ಗಳಿಸಿ ಔಟಾದರೆ, ಸೂರ್ಯ ಕುಮಾರ್ ಯಾದವ್ 10 ರನ್ ಗಳಿಸಿ ಔಟಾಗಿದ್ದಾರೆ. ಬಿರುಸಾಗಿ ಬ್ಯಾಟಿಂಗ್ ಮಾಡಿದ ಕ್ವಿಂಟನ್ ಕೇವಲ 44 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ಸಹಿತ 78 ರನ್ ಬಾರಿಸಿದರು. ಮುಂಬೈಗೆ ಇದು ಆರನೇ ಗೆಲುವಾಗಿದ್ದು ಒಟ್ಟು 8 ಪಂದ್ಯದಲ್ಲಿ ಎರಡು ಬಾರಿ ಸೋಲನ್ನು ಕಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕೆಕೆಆರ್ ನಾಲ್ಕನೇ ಸ್ಥಾನದಲ್ಲಿದೆ.